ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಸರಿಗಮಪ’ 17ನೇ ಸೀಸನ್ ಗ್ರಾಂಡ್ ಫಿನಾಲೆ ನಿನ್ನೆ ನಡೆದಿದ್ದು, ಶ್ರೀನಿಧಿ ಶಾಸ್ತ್ರಿ ವಿನ್ನರ್ ಆಗಿದ್ದಾರೆ.
ಅಶ್ವಿನ್ ಶರ್ಮಾ ಮೊದಲ ರನ್ನರ್ ಅಪ್ ಆಗಿದ್ದು, ಕಂಬದ ರಂಗಯ್ಯ ಎರಡನೇ ರನ್ನರ್ ಅಪ್ ಆಗಿದ್ದಾರೆ. ವಿನ್ನರ್ ಶ್ರೀನಿಧಿ ಶಾಸ್ತ್ರಿ ಅವರಿಗೆ ಜೀ ಕನ್ನಡ ವಾಹಿನಿಯಿಂದ 10 ಲಕ್ಷ ರೂಪಾಯಿ ನಗದು ಬಹುಮಾನ, ಟ್ರೋಫಿ ಸಿಕ್ಕಿದೆ.
ಅಶ್ವಿನ್ ಶರ್ಮಾಗೆ 5 ಲಕ್ಷ ಮತ್ತು ಕಂಬದ ರಂಗಯ್ಯ ಅವರಿಗೆ 2.5 ಲಕ್ಷ ರೂಪಾಯಿ ನಗದು ಬಹುಮಾನ ಟ್ರೋಫಿ ನೀಡಲಾಗಿದೆ. ಗ್ರಾಂಡ್ ಫಿನಾಲೆಗೆ ಐವರು ಸ್ಪರ್ಧಿಗಳು ಪ್ರವೇಶಿಸಿದ್ದು, ಇವರಲ್ಲಿ ಕಿರಣ್ ಪಾಟೀಲ್ ಮತ್ತು ಶರಧಿ ಪಾಟೀಲ್ ಅಂತಿಮ ಸುತ್ತಿನಿಂದ ಹೊರಬಿದ್ದಿದ್ದಾರೆ. ಕೊನೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ವಿಜೇತರನ್ನು ಘೋಷಿಸಿದ್ದಾರೆ.