ಈಗ ಧನುರ್ಮಾಸ ಆರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ವಿಷ್ಣುವಿನ ಅನುಗ್ರಹವನ್ನು ಪಡೆದು ಮನೆಯಲ್ಲಿ ಸಿರಿ ಸಂಪತ್ತು, ಶಾಂತಿ, ನೆಮ್ಮದಿ ನೆಲೆಸಲು ಈ ಸ್ಥಳಗಳಲ್ಲಿ 12 ದೀಪ ಬೆಳಗಿ.
ಧನುರ್ಮಾಸದಂದು ಸಂಜೆಯ ವೇಳೆ ಮನೆಯ 8 ದಿಕ್ಕುಗಳಲ್ಲಿ 8 ಮಣ್ಣಿನ ದೀಪಗಳನ್ನು ಇಟ್ಟು ಅದಕ್ಕೆ ಎಳ್ಳೆಣ್ಣೆಯನ್ನು ಹಾಕಿ 2 ಬತ್ತಿಗಳನ್ನು ಇಟ್ಟು ದೀಪಾರಾಧನೆ ಮಾಡಿ. ಹಾಗೇ 4 ದೀಪಗಳನ್ನು ಮನೆಯ ದೇವರ ಕೋಣೆಯಲ್ಲಿಟ್ಟು ವಿಷ್ಣುವಿನ ಪೂಜೆ ಮಾಡಿ.
ಈ 8 ದೀಪಗಳು ಅಷ್ಟಲಕ್ಷ್ಮಿಯರ ಸ್ವರೂಪ ಎನ್ನಲಾಗಿದೆ. ಹಾಗೇ ಈ 4 ದೀಪಗಳು ವಿಷ್ಣುವಿನ 4 ಭುಜಗಳ ಸಂಕೇತ ಎನ್ನಲಾಗಿದೆ. ಇದರಿಂದ ವಿಷ್ಣು, ಲಕ್ಷ್ಮಿಯರ ಅನುಗ್ರಹ ದೊರೆತು ಮನೆಯಲ್ಲಿ ಸುಖ, ಸಂಪತ್ತು ತುಂಬಿರುತ್ತದೆಯಂತೆ.