ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಚಾರ ಟ್ರೆಂಡ್ ಆಗಲು ತುಂಬಾ ಸಮಯ ಬೇಕಾಗುವುದಿಲ್ಲ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ಇತ್ತೀಚೆಗೆ ಟ್ವಟಿರ್‌ನಲ್ಲಿರುವ ತಮ್ಮ ಖಾತೆಯಲ್ಲಿ ’ಗೋ ಗ್ರೀನ್’ ಟ್ರೆಂಡ್ ಸೃಷ್ಟಿಸಿದ್ದಾರೆ. “ನೀವು ಕಂಡ ಅತ್ಯಂತ ಹಸುರಿನ ಚಿತ್ರವನ್ನು ಪೋಸ್ಟ್ ಮಾಡಿ. ಇಗೋ ನನ್ನದು ಇಲ್ಲಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಅನೇಕ ಮಂದಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ತಾವು ಕಂಡ ಅತ್ಯಂತ ಹಸಿರುಮಯವಾದ ಜಾಗಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಕಾಮೆಂಟ್ ವಿಭಾಗವನ್ನು ನೋಡುವುದೇ ಒಂದು ಆನಂದ ಎಂಬಂತಾಗಿದೆ.