ಮನೆ ಬಿಟ್ಟು ವರ್ಷಗಳೇ ಆಗಿದ್ದ ವ್ಯಕ್ತಿಯೊಬ್ಬರು ಬಹಳ ದಿನಗಳ ಬಳಿಕ ಹೇರ್ ಕಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದರು. ಬ್ರೆಜಿಲ್ನಲ್ಲಿ ಈ ಘಟನೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಚಿತ್ರಗಳು ವೈರಲ್ ಆದ ಬಳಿಕ ಆ ವ್ಯಕ್ತಿ ಈಗ ತಮ್ಮ ಕುಟುಂಬವನ್ನು ಮತ್ತೆ ಸೇರಿಕೊಂಡಿದ್ದಾರೆ.
ಜೋವೋ ಕೊಲ್ಹೋ ಗೈಮಾರೆಸ್ ಹೆಸರಿನ ಈ ವ್ಯಕ್ತಿ ಕಳೆದ 10 ವರ್ಷಗಳಿಂದ ತಮ್ಮ ಮನೆಯಿಂದ ಹೊರಗೆ ಇದ್ದರು. ಬಹಳ ದಿನಗಳ ಕಾಲ ಅವರು ಮಿಸ್ಸಿಂಗ್ ಆದ ಮೇಲೆ ಗೈಮಾರೆಸ್ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಹೇಳಿತ್ತು. ಆದರೆ ಈತ ಹತ್ತು ವರ್ಷಗಳ ಈ ಅವಧಿಯನ್ನು ಬೀದಿಗಳಲ್ಲಿ ಓಡಾಡಿಕೊಂಡು ಕಳೆದಿದ್ದಾರೆ. ಚಿಂದಿ ಆಯುತ್ತಾ ಬದುಕು ನಡೆಸಿಕೊಂಡು ಹೋಗಿದ್ದರು ಗೈಮಾರೆಸ್.
ಪುರುಷರ ಫ್ಯಾಶನ್ ಸ್ಟೋರ್ ಹಾಗೂ ಸಲೋನ್ ನಡೆಸುವ ಅಲೆಸ್ಸಾಂಡ್ರೋ ಲೋಬೋ ಹೆಸರಿನ ಉದ್ಯಮಿಯೊಬ್ಬರು ಗೈಮಾರೆಸ್ರನ್ನು ಕಂಡು ಆತನಿಗೆ ಊಟ ಬೇಕೇ ಎಂದು ಕೇಳಿದ್ದಾರೆ. ಆಗ ಗೈಮಾರೆಸ್ ಊಟವೇನೂ ಬೇಡ ಎಂದ ಮೇಲೆ, ಆತನ ತಲೆಗೂದಲು ಹಾಗೂ ಗಡ್ಡವನ್ನು ಟ್ರಿಮ್ ಮಾಡಿ ಆತನಿಗೆ ಒಳ್ಳೆ ಲುಕ್ ಕೊಟ್ಟಿದ್ದಾರೆ ಅಲೆಸ್ಸಾಂಡ್ರೋ. ಹೊಸ ಲುಕ್ನಲ್ಲಿ ಕಾಣುತ್ತಿದ್ದ ಗೈಮಾರೆಸ್ರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಅಲೆಸ್ಸಾಂಡ್ರೋ, ಆತನನ್ನು ಫೇಮಸ್ ಮಾಡಿದ್ದಾರೆ. ಈ ಚಿತ್ರವನ್ನು ಕಂಡ ಕುಟುಂಬ ಅಲೆಸ್ಸಾಂಡ್ರೋರನ್ನು ಸಂಪರ್ಕಿಸಿ ಆತನನ್ನು ಮರಳಿ ಮನೆಗೆ ಕರೆತಂದಿದೆ.
https://www.instagram.com/p/CI1kItoja0u/?utm_source=ig_web_copy_link