ಪ್ರಯಾಣಿಕರ ವೇಟಿಂಗ್ ಲಿಸ್ಟ್ ಪಟ್ಟಿಯನ್ನ ಕಡಿಮೆ ಮಾಡುವ ಸಲುವಾಗಿ ಅಗತ್ಯಕ್ಕೆ ತಕ್ಕಷ್ಟು ರೈಲುಗಳ ಸಂಚಾರ ಮಾಡುವ ಬಗ್ಗೆ ಸಿದ್ಧತೆ ನಡೆಸುತ್ತಿದ್ದೇವೆ ಅಂತಾ ಭಾರತೀಯ ರೈಲ್ವೆ ಇಲಾಖೆ ಹೇಳಿದೆ.
2024ರಿಂದ ರೈಲ್ವೇ ಇಲಾಖೆ ವೇಟಿಂಗ್ ಲಿಸ್ಟ್ ಪದ್ಧತಿಯನ್ನ ತೆಗೆದು ಹಾಕಲಿದೆ ಎಂಬ ವಿಚಾರವನ್ನ ತಳ್ಳಿ ಹಾಕಿದ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ರೈಲುಗಳ ಸಂಚಾರ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ ರೈಲಿನ ಸೀಟುಗಳ ಸಂಖ್ಯೆಗಿಂತ ಪ್ರಯಾಣಿಕರ ಸಂಖ್ಯೆ ಜಾಸ್ತಿ ಆದಾಗ ವೇಟಿಂಗ್ ಲಿಸ್ಟ್ ಇಡೋದು ಅನಿವಾರ್ಯವಾಗುತ್ತೆ ಎಂದು ಹೇಳಿದೆ.
ಕೋವಿಡ್ ಸಂಕಷ್ಟದ ನಡುವೆಯೂ ಭಾರತೀಯ ರೈಲ್ವೆ ಇಲಾಖೆ ತನ್ನ ಗುಣಮಟ್ಟವನ್ನ ಸುಧಾರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡ್ತಿದೆ ಎಂದು ಹೇಳಿದೆ.