2020 ಜಗತ್ತಿನ ಪಾಲಿಗೆ ಅತ್ಯಂತ ಭೀಕರ ವರ್ಷ. ಒಮ್ಮೆ ಹಿಂತಿರುಗಿ ನೋಡಿದರೆ ಮಾಸ್ಕ್, ಸ್ಯಾನಿಟೈಸರ್, 20 ಸೆಕೆಂಡ್ ಹ್ಯಾಂಡ್ ವಾಷ್ , ಸೋಶಿಯಲ್ ಡಿಸ್ಟೆನ್ಸ್, ಟಿವಿ ಜಾಲತಾಣದಲ್ಲಿ ಕಾಣುವ ಕೆಂಪು ಮುಳ್ಳು ಹೊಂದಿರುವ ಕೊರೊನಾ ವೈರಸ್ ಚಿತ್ರಗಳೇ ಕಾಣುತ್ತವೆ. ಕೋವಿಡ್ ಕಾರಣಕ್ಕೆ ಎಷ್ಟೋ ಸಾವು ಸಂಭವಿಸಿದೆ. ಇನ್ನೆಷ್ಟೊ ಜನರು ತೊಂದರೆಗೀಡಾಗಿದ್ದಾರೆ. ಈ ವರ್ಷಕ್ಕೆ ಹೊಂದಿಕೆಯಾಗುವುದು ಹಾಗೂ ಅತಿ ಹೆಚ್ಚು ಹರಿದಾಡಿದ್ದು ಕೊಫೀನ್ ಡಾನ್ಸ್.
ಅಂತ್ಯ ಸಂಸ್ಕಾರದ ಸಮಯದ ಕಪ್ಪು ಕೋಟು ಧರಿಸಿರುವ 6 ಜನ ಶವ ಪೆಟ್ಟಿಗೆಯನ್ನು ಹೊತ್ತು ವಿಸೆಂಟೋನ್ ಹಾಗೂ ಟೋನಿ ಇಗ್ಯೆ ಅವರ ನಿರ್ಮಾಣದ ಅಸ್ಟ್ರೊನೊಮಿಯಾ ಮ್ಯೂಸಿಕ್ ಗೆ ಡಾನ್ಸ್ ಮಾಡುತ್ತ ತೆರಳುವ ಮಿಮ್ಸ್ ಗಳು ಇಡೀ ವರ್ಷ ಹರಿದಾಡಿದವು. ಜನ ತಮ್ಮ ತಮ್ಮ ಊರಿನ ಹೆಸರನ್ನು ಸೇರಿಸಿ ಎಡಿಟ್ ಮಾಡಿ ಮಿಮ್ಸ್ ಹರಿಬಿಟ್ಟರು.
ವಿಡಿಯೋ ಮೂಲತಃ ಘಾನಾ ದೇಶದ್ದು. ದಕ್ಷಿಣ ಘಾನಾದ ಮಹಿಳೆಯೊಬ್ಬರು 2015 ರಲ್ಲಿ ಮೃತರಾದ ತಮ್ಮ ಅತ್ತೆಯ ಅಂತ್ಯ ಸಂಸ್ಕಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. 2020 ರಲ್ಲಿ ವಿಡಿಯೋ ಮತ್ತೆ ವೈರಲ್ ಆಗಿದೆ. ಘಾನಾದಲ್ಲಿ ಶವ ಪೆಟ್ಟಿಗೆ ಹೊತ್ತು ನೃತ್ಯ ಮಾಡುತ್ತ ಸಾಗಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.