ರೈತರ ಪ್ರತಿಭಟನೆಗೆ ಕೈಜೋಡಿಸಿದ ಒಲಂಪಿಕ್ ಪದಕ ವಿಜೇತ ಬಾಕ್ಸರ್ 19-12-2020 11:27AM IST / No Comments / Posted In: Latest News, Sports ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುತ್ತಲೇ ಬಂದಿರುವ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್ ಶುಕ್ರವಾರ ರೈತರ ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತರಿಗಾಗಿ ಜಮೀಂದರಾ ವಿದ್ಯಾರ್ಥಿ ಸಂಘಟನೆ ಊಟದ ವ್ಯವಸ್ಥೆ ಮಾಡಿತ್ತು. ಸ್ಥಳಕ್ಕೆ ಆಗಮಿಸಿದ ವಿಜಯೇಂದರ್ ಸಿಂಗ್ ಸ್ವಯಂ ಪ್ರೇರಿತರಾಗಿ ರೈತರಿಗೆ ಆಹಾರ ಬಡಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್, ನಮ್ಮ ದೇಶದ ರೈತರ ಸೇವೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಹೋರಾಟ ಕೇಂದ್ರ ಸರ್ಕಾರದ ವಿರುದ್ಧವಲ್ಲ. ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ತಪ್ಪು ಕಾನೂನುಗಳ ವಿರುದ್ಧ ಎಂದು ಹೇಳಿದರು. Delhi: Congress leader & boxer, Vijender Singh distributes food at langar organised by Jamindara Student Organization (JSO) for protesting farmers at Tikri Border "We are here to serve the farmers of our country. Our fight is not against the govt but the 3 black laws," he says pic.twitter.com/FPu4i1i8R2 — ANI (@ANI) December 18, 2020