ಭಾರೀ ಬೇಡಿಕೆ ಇರುವ ಮಾರ್ಗಗಳಲ್ಲಿ ಕ್ಲೋನ್ ರೈಲುಗಳನ್ನು ಓಡಿಸುವ ತನ್ನ ಸೇವೆಯನ್ನು ಇನ್ನಷ್ಟು ದಿನಗಳ ಮಟ್ಟಿಗೆ ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.
ಯಾವ ಮಾರ್ಗಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ಗಳು ಸಾಮರ್ಥ್ಯದ 150 ಪ್ರತಿಶತದಷ್ಟು ಇರುತ್ತವೋ, ಆ ಮಾರ್ಗಗಳಲ್ಲಿ ಈ ತದ್ರೂಪಿ ರೈಲುಗಳು (ಕ್ಲೋನ್ ರೈಲುಗಳು) ಸೆಪ್ಟೆಂಬರ್ 21ರಿಂದ ಓಡುತ್ತಾ ಬಂದಿವೆ. ಒಟ್ಟಾರೆ 40 ಜೋಡಿ ಕ್ಲೋನ್ ರೈಲುಗಳು ದೇಶದ ಅತ್ಯಂತ ಬೇಡಿಕೆ ಇರುವ ಮಾರ್ಗಗಳಲ್ಲಿ ಸಂಚರಿಸುತ್ತಾ ಬಂದಿವೆ.
ಇದಕ್ಕೂ ಮುನ್ನ 310 ವಿಶೇಷ ರೈಲುಗಳು ಸೇವೆಯಲ್ಲಿ ಇದ್ದವು. ಈ ವಿಶೇಷ ರೈಲುಗಳು ಸಂಚಾರ ಆರಂಭಿಸುವ 1-2 ಗಂಟೆಗಳ ಮುಂಚೆ ತಮ್ಮ ಸಂಚಾರ ಆರಂಭಿಸುತ್ತಿದ್ದವು. ಆದರೆ ಪ್ರಯಾಣದ ಅವಧಿ ಹಾಗೂ ನಿಲುಗಡೆಗಳನ್ನು ಕೇವಲ ಕಾರ್ಯಾಚರಣೆ ಉದ್ದೇಶಗಳಿಗೆ ಮಾತ್ರವೇ ಸೀಮಿತಗೊಳಿಸಲಾಗಿತ್ತು.
ನೈಋತ್ಯ (ದಕ್ಷಿಣ ಪಶ್ಚಿಮ) ವಲಯದಿಂದ ಮೂರು ಜೋಡಿ ರೈಲುಗಳು ಗೋವಾ, ದೆಹಲಿ ಹಾಗೂ ಬಿಹಾರದೊಂದಿಗೆ ರಾಜ್ಯ ರಾಜಧಾನಿಯನ್ನು ಸಂಪರ್ಕಿಸುತ್ತಾ ಬಂದಿವೆ.