ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ 8 ವರ್ಷದ ಬಾಲಕ ಅನುಭವ್ ನನ್ನು ಕಿಡ್ನಾಪ್ ಮಾಡಿದ 7 ಮಂದಿಯನ್ನು ಕೋಲಾರ ಜಿಲ್ಲೆ ಮಾಸ್ತಿಯಲ್ಲಿ ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಮೊನ್ನೆ ಸಂಜೆ ಉದ್ಯಮಿ ಪುತ್ರ ಅನುಭವ್ ನನ್ನು ಅಪಹರಣ ಮಾಡಿದ್ದ ಆರೋಪಿಗಳು 17 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪೊಲೀಸರ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಕೋಲಾರ ಜಿಲ್ಲೆ ಮಾಸ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕ ಸೇಫ್ ಆಗಿದ್ದು, ಮಾಸ್ತಿ ಠಾಣೆಯಲ್ಲಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಉಜಿರೆಗೆ ಕರೆತರಲಾಗುವುದು ಎಂದು ಹೇಳಲಾಗಿದೆ.