ಹೈದರಾಬಾದ್ ಹಿರಿಯ ಪುರಸಭೆ ಅಧಿಕಾರಿಗಳು ಸಾರ್ವಜನಿಕ ಹಣವನ್ನ ಬಳಸಿ ಸ್ವಂತ ಬಳಕೆಗಾಗಿ 17 ಐ ಫೋನ್ಗಳನ್ನ ಆರ್ಡರ್ ಮಾಡಿದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಐಫೋನ್ ಆರ್ಡರ್ನ್ನು ತಡೆ ಹಿಡಿಯಲಾಗಿದೆ.
ಪ್ರತಿಯೊಂದು ಫೋನಿಗೂ 1.29 ಲಕ್ಷ ರೂಪಾಯಿಯಂತೆ ಒಟ್ಟು 27 ಲಕ್ಷ ರೂಪಾಯಿ ನೀಡಲಾಗಿತ್ತು.
ಹೈದರಾಬಾದ್ ಪುರಸಭೆ ಮೇಯರ್ ಹಾಗೂ ಪದಾಧಿಕಾರಿಗಳು ವಾರ್ಷಿಕ ಬಜೆಟ್ ಅಂಗೀಕರಿಸಿದ ನೆಪವೊಡ್ಡಿ ತಮಗೆ ತಾವೇ ಗಿಫ್ಟ್ ಕೊಂಡುಕೊಳ್ಳಲು ಮುಂದಾಗಿದ್ದರು.
2021ರ ಅವಧಿಯಲ್ಲಿ ಹೊಸ ಸಮಿತಿಯೊಂದನ್ನ ಆಯ್ಕೆ ಮಾಡುವ ಸ್ಥಾಯಿ ಸಮಿತಿಯು 14 ನಿರ್ಣಯಗಳನ್ನ ಅಂಗೀಕರಿಸಲು ಗುರುವಾರ ಸಭೆ ಸೇರಿತ್ತು. ಈ ಸಭೆಯಲ್ಲಿ 5600 ಕೋಟಿ ರೂಪಾಯಿ ಮೊತ್ತದ ವಾರ್ಷಿಕ ಬಜೆಟ್ಗೆ ಅನುಮೋದನೆ ನೀಡಲಾಗಿತ್ತು.
ಸಿಬ್ಬಂದಿಗೆ ಸಂಬಳ ನೀಡೋಕೆ ಹಣವಿಲ್ಲದ ಈ ಸಂದರ್ಭದಲ್ಲಿ ಸಾರ್ವಜನಿಕ ಹಣವನ್ನ ಬಳಸಿಕೊಂಡು ಅದು ಹೇಗೆ ನೀವು ಉಡುಗೊರೆ ಪಡೆಯುತ್ತೀರಿ ಅಂತಾ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ಪ್ರಶ್ನೆ ಮಾಡಿದ್ದರು.
ಅಲ್ಲದೇ ಮೇಯರ್ ಬೊಂಟು ರಾಮಮೋಹನ್ ನಿರ್ಧಾರಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬಂದ ಹಿನ್ನೆಲೆ ಐ ಫೋನ್ ಆರ್ಡರ್ನ್ನು ತಡೆಹಿಡಿಯಲಾಗಿದೆ.