ಮನೆಗೆ ಮಗುವಿನ ಆಗಮನವಾಗುತ್ತೆ ಅನ್ನೋ ವಿಚಾರಕ್ಕಿಂತ ಇನ್ನೊಂದು ಸಿಹಿ ಸುದ್ದಿ ಏನಿದೆ ಹೇಳಿ. ಇದೇ ರೀತಿ ಮನೆಗೆ ಹೊಸ ಅತಿಥಿಯ ಆಗಮನದಲ್ಲಿದ್ದ ಅಮೆರಿಕದ ದಂಪತಿಗೆ ಕೊರೊನಾ ವೈರಸ್ ದೊಡ್ಡ ಹೊಡೆತವನ್ನೇ ನೀಡಿದೆ. ಕೊರೊನಾ ಸೋಂಕಿಗೆ ಒಳಗಾದ 5 ದಿನಗಳಲ್ಲಿ ವೆನ್ನೆಸ್ಸಾ ಎಂಬ ಮಹಿಳೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಬ್ಬರು ಗಂಡು ಮಕ್ಕಳ ತಾಯಿಯಾಗಿದ್ದ ವೆನ್ನೆಸ್ಸಾ ಮೂರನೇ ಮಗುವಿಗಾಗಿ ಗರ್ಭ ಧರಿಸಿದ್ದರು. ಆದರೆ ಈಕೆ ಗರ್ಭಿಣಿ ಇದ್ದಾಗಲೇ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಕೊರೊನಾ ಸೋಂಕು ಇದ್ದಿದ್ದರಿಂದ ಆಕೆ ಮಗುವಿಗೆ ಜನ್ಮ ನೀಡಿದ್ದರೂ ಸಹ ಒಂದು ಬಾರಿಯೂ ಆ ಮಗುವನ್ನ ಎತ್ತಿಕೊಳ್ಳುವ ಭಾಗ್ಯವೂ ಆಕೆಗೆ ಸಿಕ್ಕಿರಲಿಲ್ಲ. ಸೋಂಕು ಗುಣಮುಖವಾಗದೇ ಆಕೆ ಹೃದಯಾಘಾತದಿಂದ ಅಸು ನೀಗಿದ್ದಾಳೆ.
ತಾಯಿ ಹಾಗೂ ಮಗುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗಿದ್ದ ಪತಿ ಇವರಿಬ್ಬರನ್ನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದ ಎನ್ನಲಾಗಿದೆ. ವಿಡಿಯೋ ಕಾಲ್ ಮೂಲಕ ಸೋಂಕಿತ ಮಹಿಳೆ ತನ್ನ ಹಸುಗೂಸಿನ ಮುಖವನ್ನ ನೋಡುತ್ತಿದ್ದರು ಅಂತಾ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ‘