ಕ್ರಿಸ್ಮಸ್ ಸಂಭ್ರಮದಲ್ಲಿರುವ ಸ್ಕಾಟ್ಲೆಂಡ್ನ ಮನೆಯೊಂದಕ್ಕೆ ಗಿಡುಗವೊಂದು ಬಂದು ಅಲ್ಲಿರುವ ಕ್ರಿಸ್ಮಸ್ ಮರದ ಮೇಲೆ ಕುಳಿತುಕೊಂಡ ಕಾರಣ ಆ ಮನೆಯ ಮಂದಿ ಪೊಲೀಸರಿಗೆ ಕರೆ ಮಾಡಿದ ಘಟನೆ ಜರುಗಿದೆ. ಇಲ್ಲಿನ ಅಬರ್ಡೀನ್ಶೈರ್ ಪ್ರದೇಶದ ಲೂಯಿಸ್ ಆಂಡರ್ಸನ್ ಅವರ ಮನೆಗೆ ಗಿಡುಗ ಭೇಟಿ ಕೊಟ್ಟಿದೆ.
ಗಿಡುಗವು ಕ್ರಿಸ್ಮಸ್ ಟ್ರೀ ಮೇಲೆ 40 ನಿಮಿಷಕ್ಕೂ ಹೆಚ್ಚಿನ ಅವಧಿಗೆ ಕುಳಿತಿತ್ತು ಎಂದು ಆಂಡರ್ಸನ್ ಹೇಳಿದ್ದಾರೆ. ಅಪರೂಪದ ಈ ಅತಿಥಿಯನ್ನು ಹ್ಯಾಂಡಲ್ ಮಾಡಲು ಪೊಲೀಸರಿಂದ ಸಾಧ್ಯವಾಗದೇ ಸ್ಥಳೀಯ ವನ್ಯಜೀವಿ ಹಾಗೂ ಪ್ರಾಣಿ ರಕ್ಷಣಾ ಕೇಂದ್ರದ ಮೊರೆ ಹೋಗಬೇಕಾಗಿ ಬಂದಿತ್ತು.
“ಗಿಡುಗವು ಕ್ರಿಸ್ಮಸ್ ಟ್ರೀ ಮೇಲೆ ಶಾಂತವಾಗಿಯೇ ಕುಳಿತುಕೊಂಡಿತ್ತು. ಆದರೆ ಮನೆ ಮಂದಿಯ ಸುರಕ್ಷತೆ ಬಗ್ಗೆ ಕಳವಳದಿಂದ ಸಹಾಯ ಕೋರಿ ಪೊಲೀಸರಿಗೆ ಕರೆ ಮಾಡಬೇಕಾಗಿ ಬಂತು,” ಎಂದು ಆಂಡರ್ಸನ್ ತಿಳಿಸಿದ್ದಾರೆ.