ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಲುವಾಗಿ 60 ವರ್ಷದ ವೃದ್ಧ ಬರೋಬ್ಬರಿ 1 ಸಾವಿರ ಕಿಲೋಮೀಟರ್ವರೆಗೆ ಸೈಕಲ್ ಸವಾರಿ ಮಾಡಿದ್ದಾರೆ. ಬಿಹಾರದ ಸಿವಾನ್ ಪ್ರದೇಶದ ಸತ್ಯದೇವ್ ಸೈಕಲ್ ಮೂಲಕವೇ ದೆಹಲಿ ಪ್ರತಿಭಟನಾ ಸ್ಥಳವನ್ನ ತಲುಪಿದ್ದಾರೆ. 11 ದಿನಗಳ ಸೈಕಲ್ ಸವಾರಿ ಮೂಲಕ ದೆಹಲಿ – ಹರಿಯಾಣ ಗಡಿ ತಲುಪಿದ್ದಾರೆ.
ನನ್ನ ತವರು ಜಿಲ್ಲೆಯಾದ ಸಿವಾನ್ನಿಂದ ಇಲ್ಲಿಯವರೆಗೆ ಬರಲು ನನಗೆ 11 ದಿನಗಳು ಬೇಕಾಯಿತು. ಕೇಂದ್ರ ಸರ್ಕಾರ ಕೃಷಿ ಕಾನೂನನ್ನ ಹಿಂಪಡೆಯಬೇಕು. ಈ ಚಳವಳಿ ಮುಗಿಯುವರೆಗೂ ನಾನು ಇಲ್ಲಿಯೇ ಇರುತ್ತೇನೆ ಎಂದು ಸತ್ಯದೇವ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾನೂನನ್ನ ವಿರೋಧಿಸಿ ನವೆಂಬರ್ 26ರಿಂದ ರೈತರು ದೆಹಲಿಯ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.