
ಬೆಂಗಳೂರು: ನಾಪತ್ತೆಯಾಗಿದ್ದ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ಪತ್ತೆಯಾಗಿದ್ದಾರೆ ಮೂರು ದಿನಗಳ ನಂತರ ಅವರು ಪತ್ತೆಯಾಗಿದ್ದಾರೆ.
ಅವರ ಕಾರ್ ನೆಲಮಂಗಲ ಟೋಲ್ ಗೇಟ್ ಮೂಲಕ ಹಾದು ಹೋಗಿರುವುದು ಪತ್ತೆಯಾಗಿತ್ತು. ಅವರ ಪತ್ತೆಗಾಗಿ 10 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅವರು ಏಕೆ ನಾಪತ್ತೆಯಾಗಿದ್ದರು ಎನ್ನುವುದು ಗೊತ್ತಾಗಬೇಕಿದೆ. ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಅಪಹರಿಸಿರಬಬಹುದೆಂದು ಹೇಳಲಾಗಿತ್ತು.
ತೀವ್ರ ಹುಡುಕಾಟದ ನಂತರ ಮಂಜುನಾಥ್ ಪತ್ತೆಯಾಗಿದ್ದು, ನೆಲಮಂಗಲ ಠಾಣೆಗೆ ಅವರನ್ನು ಕರೆದುಕೊಂಡು ಬರಲಾಗುವುದು ಎಂದು ಹೇಳಲಾಗಿದೆ. ರಾಜಕೀಯ ಒತ್ತಡ ಅಥವಾ, ಪ್ರಭಾವಿಗಳು ಅವರನ್ನು ಅಪಹರಿಸಿರುವ ವದಂತಿ ಹಿನ್ನಲೆಯಲ್ಲಿ ತನಿಖೆ ಮುಂದುವರೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.