ಹಿಂದೂ ಸಂಪ್ರದಾಯಗಳಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನಮಾನ ಇರುವುದು ಎಲ್ಲರಿಗೂ ತಿಳಿದ ವಿಚಾರ.
ಉತ್ತರ ಪ್ರದೇಶದ ರೈತರೊಬ್ಬರು ಕರುವೊಂದನ್ನು ಪುತ್ರನಂತೆ ದತ್ತು ಪಡೆದಿದ್ದಾರೆ. ವಿಜಯ್ಪಾಲ್ ಹಾಗೂ ರಾಜೇಶ್ವರಿ ದೇವಿ ದಂಪತಿ ಕರುವೊಂದನ್ನು ಪುತ್ರನ ರೂಪದಲ್ಲಿ ದತ್ತು ಪಡೆದಿದ್ದಾರೆ. ಮದುವೆಯಾಗಿ 15 ವರ್ಷಗಳಾದರೂ ಸಹ ಮಕ್ಕಳಾಗದೇ ಇರುವ ಕಾರಣ ಈ ದಂಪತಿ ಹೀಗೆ ಮಾಡಿದ್ದಾರೆ.
ಕರುವಿಗೆ ’ಲಲ್ತು ಬಾಬು’ ಎಂದು ಹೆಸರಿಟ್ಟಿದ್ದು, ಕೇಶ ಮುಂಡನ ಸಂಪ್ರದಾಯವನ್ನು ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಈ ಕರುವನ್ನು ದಂಪತಿಗಳು ದತ್ತು ಪಡೆದುಕೊಂಡಿದ್ದಾರೆ. ಗೋಮತಿ ನದಿ ತೀರದಲ್ಲಿ ನಡೆದ ಈ ಶಾಸ್ತ್ರೋಕ್ತ ಸಮಾರಂಭಕ್ಕೆ ಸುಮಾರು 500ಕ್ಕೂ ಹೆಚ್ಚು ಅತಿಥಿಗಳು ಸಾಕ್ಷಿಯಾಗಿದ್ದಾರೆ.
“ಲಲ್ತು ಹುಟ್ಟಿದಾಗಿನಿಂದಲೂ ಮಗನಂತೆಯೇ ನಮ್ಮೊಂದಿಗೆ ಇದ್ದಾನೆ. ನಮ್ಮ ಮೇಲೆ ಲಲ್ತು ನಿಷ್ಕಲ್ಮಷವಾದ ಪ್ರೀತಿಯನ್ನು ಹೊಂದಿದ್ದಾನೆ” ಎಂದು ವಿಜಯ್ಪಾಲ್ ತಿಳಿಸಿದ್ದಾರೆ.