ಪ್ರಸ್ತುತ ಮನೆಯಿಂದಲೇ ಕೆಲಸ ಮಾಡುವ ಕಾರ್ಯ ನಡೆಯುತ್ತಿರುವ ಈ ಜಮಾನಾದಲ್ಲಿ ಪೈಜಾಮಾ ಹಾಗೂ ಬ್ಲೇಜರ್ ಕಾಂಬಿನೇಷನ್ನ ಡ್ರೆಸ್ಗಳು ಮಾರ್ಕೆಟ್ನಲ್ಲಿ ಟ್ರೆಂಡಿಂಗ್ನಲ್ಲಿವೆ.
ಮನೆಯಲ್ಲೇ ಕೆಲಸ ಮಾಡ್ತಾ ಮೀಟಿಂಗ್ನಲ್ಲಿ ಭಾಗಿಯಾಗುವವರಿಗೆ ಈ ಡ್ರೆಸ್ಗಳು ಸಿಕ್ಕಾಪಟ್ಟೆ ಆರಾಮದಾಯಕ ಎನಿಸುತ್ತವೆ.
ಇದೀಗ ಇಂತಹದ್ದೇ ಇನ್ನೊಂದು ವಿಚಿತ್ರ ಪ್ಯಾಂಟ್ ಒಂದು ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದೆ. ಪ್ಯಾಂಟ್ನ ವಿನ್ಯಾಸದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಪ್ಯಾಂಟ್ಗಳನ್ನ ಸೆಣಬಿನ ದಾರದಿಂದ ತಯಾರಿಸಲಾಗಿದೆ ಅನ್ನೋದೇ ವಿಶೇಷ.
ಈ ಸೆಣಬಿನ ಪ್ಯಾಂಟ್ನ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ ಐಪಿಎಸ್ ಅಧಿಕಾರಿ ಅರುಣ್ ಬೊಥ್ರಾ ಓಕೆ ಅಂತಾ ಶೀರ್ಷಿಕೆ ನೀಡಿದ್ದಾರೆ. ‘ ಈ ಫೋಟೋ ನೋಡಿದ ಟ್ವೀಟಿಗರು ಕಾಮೆಂಟ್ಗಳ ಸುರಿಮಳೆಯನ್ನ ಹರಿಸಿದ್ದಾರೆ. ಅದರಲ್ಲೂ ಓರ್ವ ಟ್ವೀಟಿಗನಂತೂ ಇದರ ಜೊತೆಗೆ 5 ಕೆಜಿ ಆಲೂಗಡ್ಡೆ ಖರೀದಿ ಮಾಡಬೇಕಾ ಇಲ್ಲ ಇದು ಪ್ರತ್ಯೇಕವಾಗಿಯೇ ಖರೀದಿ ಮಾಡೋಕೆ ಆಗುತ್ತಾ ಅಂತಾ ವ್ಯಂಗ್ಯವಾಡಿದ್ದಾರೆ.