ಮಾಸ್ಕೊ: ನಾಯಿಗಳನ್ನು ಪಳಗಿಸಿ, ಅವುಗಳಿಂದ ವಿಧ – ವಿಧದ ಸರ್ಕಸ್ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ಮಾನವನ ಪ್ರೀತಿಯ ಪ್ರಾಣಿ ಬೆಕ್ಕು ಮಾತು ಕೇಳುವುದು ಕಡಿಮೆ. ಇಲ್ಲೊಬ್ಬರು ಬೆಕ್ಕಿಗೆ ಪಿಯಾನೊ ಕಲಿಸಿ ಸೈ ಎನಿಸಿಕೊಂಡಿದ್ದಾರೆ.
ರಷ್ಯಾದ ಗಿಟಾರಿಸ್ಟ್ ಮಾರ್ಸೆಲ್ ಗಿಲ್ ಮಾನೊವ್ ಎಂಬುವವರು ತಮ್ಮ ಟ್ವಿಟರ್ ಖಾತೆ ರಾಬ್ ಆ್ಯಂಡ್ ರೋಲ್ ನಲ್ಲಿ 36 ಸೆಕೆಂಡ್ ನ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಅದನ್ನು 8 ಲಕ್ಷ ಜನ ವೀಕ್ಷಿಸಿದ್ದಾರೆ. 1.75 ಲಕ್ಷ ಜನ ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ ಗಳು ಬಂದಿವೆ.
ಮಾರ್ಸೆಲ್ ಗಿಟಾರ್ ನುಡಿಸುತ್ತಿದ್ದರೆ ಅದಕ್ಕೆ ತಕ್ಕಂತೆ ಬೆಕ್ಕು ಪಿಯಾನೋ ನುಡಿಸುತ್ತದೆ. ತನ್ನ ಮುಂದಿನ ಎರಡು ಕಾಲುಗಳನ್ನು ಕೀ ಮಣೆಯ ಮೇಲಿಟ್ಟು ಒಂದೊಂದನ್ನೇ ಹುಡುಕಿ ಒತ್ತುತ್ತದೆ.
“ಕೆಲವರು ಟಿಕ್ ಟಾಕ್ ನಲ್ಲಿ ಬೆಕ್ಕಿನ ವಿಡಿಯೋವನ್ನು ಎಡಿಟ್ ಮಾಡಿ ಹಾಕುತ್ತಾರೆ. ಆದರೆ, ಇದು ನಿಜವಾದ ವಿಡಿಯೊ” ಎಂದು ಕ್ಯಾಪ್ಶನ್ ನೀಡಿದ್ದಾರೆ. ಅಷ್ಟೇ ಅಲ್ಲ. ಕಮೆಂಟ್ ಬಾಕ್ಸ್ ನಲ್ಲಿ ಅವರು ಬೆಕ್ಕು ಪಿಯಾನೊ ನುಡಿಸುವ ಇನ್ನೊಂದು ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.
https://twitter.com/thegallowboob/status/1338903030369046533?ref_src=twsrc%5Etfw%7Ctwcamp%5Etweetembed%7Ctwterm%5E1338903030369046533%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fviral-video-guitarists-duet-with-a-cat-playing-the-keyboard-has-netizens-impressed-7107169%2F