alex Certify ಕೊರೊನಾ ಸಂತ್ರಸ್ಥರ ನೆರವಿಗಾಗಿ ಕೋಟ್ಯಾಂತರ​ ಹಣ ದಾನ ಮಾಡಿದ ಅಮೆಜಾನ್​ ಸಂಸ್ಥಾಪಕನ ಮಾಜಿ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂತ್ರಸ್ಥರ ನೆರವಿಗಾಗಿ ಕೋಟ್ಯಾಂತರ​ ಹಣ ದಾನ ಮಾಡಿದ ಅಮೆಜಾನ್​ ಸಂಸ್ಥಾಪಕನ ಮಾಜಿ ಪತ್ನಿ

ಲೇಖಕಿ, ಅಮೆಜಾನ್​​ ಸಂಸ್ಥಾಪಕ ಜೆಫ್​ ಬೆಝೋಸ್​ ಮಾಜಿ ಪತ್ನಿ ಮ್ಯಾಕೆಂಜಿ ಕಳೆದ ನಾಲ್ಕು ತಿಂಗಳಲ್ಲಿ 4.1 ಬಿಲಿಯನ್​ ಡಾಲರ್​ ಹಣವನ್ನ ನೂರಾರು ಸಂಸ್ಥೆಗಳಿಗೆ ದಾನ ಮಾಡಿದ್ದಾಗಿ ಹೇಳಿದ್ದಾರೆ.

ಸ್ಕಾಟ್​ ತಾನು ಮಾಡಿದ ಉಪಕಾರದ ಕಾರ್ಯವನ್ನ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್​ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಆದರೆ ಕೋಟ್ಯಾಧಿಪತಿಗಳು ಇನ್ನಷ್ಟು ಹಣವನ್ನ ಸಂಪಾದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವಿವಿಧ ವಿಶ್ವವಿದ್ಯಾಲಗಳು, ಹಾಗೂ ಸಂಘ ಸಂಸ್ಥೆಗಳಿಗೆ ಸರಿ ಸುಮಾರು 1.68 ಬಿಲಿಯನ್​ ಡಾಲರ್​ ದಾನ ಮಾಡಿದ ಬಳಿಕ ಜುಲೈ ತಿಂಗಳಲ್ಲಿ ಸ್ಕಾಟ್​ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೀವನ ಸುಧಾರಿಸಲು ನಾವು ಹಣವನ್ನ ನೀಡಿದ್ರೆ ಹೇಗೆ ಎಂದು ತಮ್ಮ ಗುಂಪಿನ ಸದಸ್ಯರ ಬಳಿ ಅಭಿಪ್ರಾಯ ಕೇಳಿದ್ದರು. ‘ ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಕಾಟ್​ ಗುಂಪಿನ ಸದಸ್ಯರು ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಸಂಘ – ಸಂಸ್ಥೆಗಳನ್ನ ಗುರುತಿಸಿದ್ದರು.

6490 ಸಂಸ್ಥೆಗಳನ್ನ ಗುರುತಿಸಿದ ಸ್ಕಾಟ್​ ಹಾಗೂ ಆಕೆಯ ತಂಡ ಅದರಲ್ಲಿ 822 ಸಂಘಗಳ ಮೇಲೆ ಸಂಶೋಧನೆ ನಡೆಸಿ ಅದರಲ್ಲಿ 438 ಸಂಸ್ಥೆಯನ್ನ ಆಯ್ಕೆ ಮಾಡಿತ್ತು. ಇದರಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿ 50 ರಾಜ್ಯಗಳ 384 ಸಂಘಗಳಿಗೆ ಸ್ಕಾಟ್​ ದಾನ ಮಾಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...