ಬೆಂಗಳೂರು: ಹೊರ ರಾಜ್ಯದಿಂದ ಕಾಲೇಜು ಅಡ್ಮಿಷನ್ ಗೆಂದು ಬಂದಿದ್ದ ವಿದ್ಯಾರ್ಥಿನಿ ಮೇಲೆ ಪರಿಚಿತ ವಿದ್ಯಾರ್ಥಿಯೇ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಘೋರ ಘಟನೆ ಬೆಂಗಳೂರಿನ ಬ್ಯಾಡರಾಯನಹಳ್ಳಿಯಲ್ಲಿ ನಡೆದಿದೆ.
ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ಯುವಕ ಒಂದೇ ರಾಜ್ಯದವರಾಗಿದ್ದು, ಪರಿಚಿತರೇ ಆಗಿದ್ದಾರೆ. ಆರೋಪಿ ಕೂಡ ಕಾಲೇಜು ವಿದ್ಯಾರ್ಥಿಯಾಗಿದ್ದು, ಬ್ಯಾಡರಾಯನಹಳ್ಳಿಯಲ್ಲಿ ರೂಮ್ ಮಾಡಿಕೊಂಡಿದ್ದನು.
ಕಾಲೇಜು ಅಡ್ಮಿಷನ್ ಗೆ ಬಂದ ವಿದ್ಯಾರ್ಥಿನಿಯನ್ನು ತನ್ನ ರೂಮಿಗೆ ಬರುವಂತೆ ಕರೆದಿದ್ದಾನೆ. ಪರಿಚಯದವನೆಂದು ನಂಬಿ ಹೋದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿದ್ದಾನೆ. ಬ್ಯಾಡರಾಯನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.