ತಮ್ಮ ಕನಸನ್ನ ನನಸು ಮಾಡಿಕೊಳ್ಳೋಕೆ ಕೆಲವರು ಅತ್ಯಂತ ಕಠಿಣ ಹಾದಿಯಲ್ಲಿ ಸಾಗುತ್ತಾರೆ. ಇಂತಹ ಅನೇಕ ಮಾದರಿ ಘಟನೆಗಳು ನಮ್ಮ ಸುತ್ತಮುತ್ತಲೇ ನಡೆಯುತ್ತಿರುತ್ತೆ. ಈ ಸಾಲಿಗೆ ಇದೀಗ ಬಿಹಾರದ 28 ವರ್ಷದ ಯುವಕನೊಬ್ಬ ಸೇರಿದ್ದಾನೆ. ಸುಂದರ್ಪುರಬಾರ್ಜಾ ಗ್ರಾಮದ ಬಲ್ದಂಕ ತಿವಾರಿ ಎಂಬ ಯುವಕ ಕಷ್ಟಪಟ್ಟು ಶ್ರಮ ವಹಿಸಿ ಇಂಡಿಯನ್ ಮಿಲಿಟರಿ ಆಫೀಸರ್ ಅಕಾಡೆಮಿಯಲ್ಲಿ ಪದವಿ ಪೂರೈಸಿದ್ದಾನೆ.
ತಮ್ಮ ಪತ್ನಿ, ನಾಲ್ಕು ತಿಂಗಳ ಮಗು ಹಾಗೂ ವೃದ್ಧ ತಾಯಿಯ ಸಮ್ಮುಖದಲ್ಲೇ ಬಲದಂಕ ಭಾರತೀಯ ಯೋಧರಾಗಿ ಅಧಿಕಾರ ಸ್ವೀಕಾರ ಮಾಡಿದ್ರು. ಈ ಕಾರ್ಯಕ್ರಮಕ್ಕೆ ಹಾಜರಿದ್ದ ಎಲ್ಲರ ಕಣ್ಣಲ್ಲೂ ಬಲದಂಕ ಪರಿಶ್ರಮದ ಫಲ ಕಂಡು ನೀರು ತುಂಬಿತ್ತು.
ಕೊರೊನಾ ವೈರಸ್, ಲಾಕ್ಡೌನ್ ಸಂಕಷ್ಟದಿಂದಾಗಿ ತಿವಾರಿಗೆ ತನ್ನ ಮಗಳು ಹುಟ್ಟಿದ ವಾರ್ತೆ ಕೇಳಿದ್ದರೂ ಸಹ ಅಲ್ಲಿಗೆ ಹೋಗಿ ಮಗಳನ್ನ ನೋಡೋಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಡಿಸೆಂಬರ್ 12ರಂದು ತಮ್ಮ ಮದುವೆ ವಾರ್ಷಿಕೋತ್ಸವದ ದಿನದಂದು ತಿವಾರಿ ಮೊದಲ ಬಾರಿಗೆ ಮಗಳ ಮುಖವನ್ನ ನೋಡಿದ್ದರಂತೆ. ಮಗ ಪಟ್ಟ ಪರಿಶ್ರಮದ ಬಗ್ಗೆ ವಿವರಿಸಿದ ತಾಯಿ ಮುನ್ನಿ ದೇವಿ ನನ್ನ ಮಗ ಹದಿನಾರನೇ ವಯಸ್ಸಿನಲ್ಲೇ ದುಡಿಮೆ ಆರಂಭಿಸಿದ. ದಿನಕ್ಕೆ 50 – 100 ರೂಪಾಯಿ ಸಂಪಾದನೆ ಮಾಡಬೇಕು ಅಂದರೆ ಆತ 12 ತಾಸು ದುಡಿಯಬೇಕಾದ ಅನಿರ್ವಾಯತೆ ಇತ್ತು ಎಂದು ಹೇಳುತ್ತಾ ಭಾವುಕರಾದ್ರು.
ಖಾಸಗಿ ಮಾಧ್ಯಮದ ಜೊತೆ ತನ್ನ ಜೀವನದ ಅನಭವಗಳನ್ನ ಸ್ವತಃ ತಿವಾರಿ ಹಂಚಿಕೊಂಡ್ರು. ಒಳ್ಳೆಯ ಕೆಲಸ ಹುಡುಕಬೇಕು ಅಂತಾ ಓಡಿಶಾದ ರೂರ್ಕೆಲಾ ಬಂದ ತಿವಾರಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ರು. ಬಳಿಕ ಉಪ್ಪಿನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ ತಿವಾರಿ ಕೆಲಸದ ಜೊತೆಗೆ ತಮ್ಮ ವ್ಯಾಸಂಗವನ್ನೂ ಮುಂದುವರಿಸಿದ್ರು. ಕುಟುಂಬದ ಸದಸ್ಯನೊಬ್ಬ ಯೋಧನಾಗಿದ್ದನ್ನ ಕಂಡು ಪ್ರೇರಣೆ ಪಡೆದ ತಿವಾರಿ ತಾವು ಕೂಡ ಯೋಧನಾಗಬೇಕೆಂಬ ಕನಸನ್ನ ಸಾಕಾರಗೊಳಿಸಿಕೊಂಡಿದ್ದಾರೆ.