ಗ್ರಾಹಕರನ್ನ ಸೆಳೆಯುವ ಉದ್ದೇಶದಿಂದ ಲಂಡನ್ನ ಸ್ಮಾರ್ಟ್ ಫ್ರಿಜ್ ಒಂದರ ದೊಡ್ಡ ಪರದೆ ಮೇಲೆ ಪಾರ್ನ್ ಹಬ್ ಎಂದು ಬರೆಯಲಾಗಿದ್ದು ಇದನ್ನ ನೋಡಿದ ಗ್ರಾಹಕರು ಶಾಕ್ ಆಗಿದ್ದಾರೆ.
ಅಲೆಕ್ಸ್ ಮಿಚಿ ಎಂಬವರು ತಮ್ಮ ಪೋಷಕರೊಂದಿಗೆ ಆಕ್ಸ್ಫರ್ಡ್ನಲ್ಲಿ ಕ್ರಿಸ್ಮಸ್ ಶಾಪಿಂಗ್ಗೆ ತೆರಳಿದ್ದರು. ಈ ವೇಳೆ ಪ್ರತಿಷ್ಠಿತ ಜಾನ್ ಲೆವಿಸ್ ಅಂಗಡಿಯೊಳಗಿದ್ದ ಗುಂಪೊಂದು ಫ್ರಿಡ್ಜ್ನ್ನ ನೋಡಿ ಮುಗುಳ್ನಗುತ್ತಿದ್ದರು.
ಫ್ರಿಡ್ಜ್ ನಲ್ಲಿ ಅಂತಹ ವಿಶೇಷತೆ ಏನಿದೆ ಎಂದು ನೋಡಿದಾಗ ಅದರ ಮೇಲೆ ನೀಲಿ ಚಿತ್ರದ ಬಗ್ಗೆ ಬರೆದಿದ್ದನ್ನ ಅಲೆಕ್ಸ್ ಕಂಡಿದ್ದಾರೆ. ಇದನ್ನ ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಹದಿಹರೆಯದ ಮಕ್ಕಳು ಈ ಫ್ರಿಡ್ಜ್ನ್ನ ನೋಡಿ ತಲೆ ತಗ್ಗಿಸಿ ನಗುತ್ತಿದ್ದುದ್ದನ್ನ ನಾನು ನೋಡಿದೆ. ಹೀಗಾಗಿ ಫ್ರಿಡ್ಜ್ ಕಡೆ ನನ್ನ ಗಮನ ಹೋಯಿತು. ಕೋವಿಡ್ನಿಂದಾಗಿ ಅನೇಕ ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಗ್ರಾಹಕರನ್ನ ಸೆಳೆಯೋಕೆ ಇವರು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ಅಂತಾ ಅಲೆಕ್ಸ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಫ್ರಿಜ್ನಲ್ಲಿರುವ ಈ ಪರದೆಯಲ್ಲಿ ಕೇವಲ ನೀಲಿ ಚಿತ್ರದ ಮುಖಪುಟ ಮಾತ್ರವಿದೆ ಹೊರತು ಇದರಲ್ಲಿ ಯಾವುದೇ ಅಶ್ಲೀಲ ದೃಶ್ಯಗಳಿಲ್ಲ ಎಂದು ಜಾನ್ ಲೆವಿಸ್ ವಕ್ತಾರರು ಹೇಳಿದ್ದಾರೆ.