alex Certify 10 ವರ್ಷಗಳ ಹಿಂದೆ ಸುನಾಮಿಯಲ್ಲಿ ಕಾಣೆಯಾಗಿದ್ದ ದೋಣಿ ಈಗ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷಗಳ ಹಿಂದೆ ಸುನಾಮಿಯಲ್ಲಿ ಕಾಣೆಯಾಗಿದ್ದ ದೋಣಿ ಈಗ ಪತ್ತೆ

ಸುಮಾರು 10 ವರ್ಷಗಳ ಹಿಂದೆ ಸುನಾಮಿಯಿಂದಾಗಿ ಕಾಣೆಯಾಗಿದ್ದ ಮೀನುಗಾರಿಕಾ ದೋಣಿಯೊಂದು ಫೆಸಿಫಿಕ್​ನ ಒಂದು ಸಣ್ಣ ದ್ವೀಪದಲ್ಲಿ ಪತ್ತೆಯಾಗಿದೆ.

ವರದಿಗಳ ಪ್ರಕಾರ 2011ರ ಗ್ರೇಟ್​ ಈಸ್ಟ್ ಜಪಾನ್​ ಭೂಕಂಪದ ಬಳಿಕ ಈ ದೋಣಿ ನಾಪತ್ತೆಯಾಗಿತ್ತು. ಈ ಭೂಕಂಪ ದುರಂತದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಜಪಾನ್​ನಲ್ಲಿ 9.0 ತೀವ್ರತೆ ದಾಖಲಿಸಿದ ಅತ್ಯತ ಶಕ್ತಿಶಾಲಿ ಭೂಕಂಪ ಅದಾಗಿತ್ತು.

ಈ ಸಮಯದಲ್ಲಿ ಕಾಣೆಯಾಗಿದ್ದ ದೋಣಿಯೊಂದು ಜಪಾನ್​​ನಿಂದ ದಕ್ಷಿಣಕ್ಕೆ 4-4 ಮೈಲಿ ದೂರದಲ್ಲಿರುವ ಹಚಿಜೊ ದ್ವೀಪದಲ್ಲಿ ಕಾಣಸಿಕ್ಕಿದೆ. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಆಧರಿಸಿ 18 ಅಡಿ ಉದ್ದದ ದೊಣಿಯನ್ನ ಶೋಧಿಸಿದ ಬಳಿಕ ಕೆಸೆನುಮಾ ಮೀನುಗಾರಿ ನೌಕಾಪಡೆ ಇದನ್ನ ವಶಕ್ಕೆ ಪಡೆದುಕೊಂಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...