ನವದೆಹಲಿ: ಕೊರೊನಾದಿಂದ ಗುಣಮುಖರಾದವರಿಗೆ ಆತಂಕಕಾರಿ ಮಾಹಿತಿ ಇಲ್ಲಿದೆ. ವಯಸ್ಸಾದವರು, ನಾನಾ ಕಾಯಿಲೆ ಇರುವವರಿಗೆ ಮ್ಯೂಕರ್ ಮೈಕೋಸಿಸ್ ಸೋಂಕು ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ.
ಕೊರೋನಾಗಿಂತಲೂ ತುಂಬಾ ಡೇಂಜರಸ್ ಆಗಿರುವ ಮ್ಯೂಕರ್ ಮೈಕೋಸಿಸ್ ಫಂಗಸ್ ಸೋಂಕು ತಗುಲಿದರೆ ಅಪಾಯ ಗ್ಯಾರಂಟಿ. ಈ ಕಾಯಿಲೆ ಪ್ರಾಣ ಹೋಗುವ ಹಂತಕ್ಕೆ ತಲುಪಿದಾಗ ಬಯಲಾಗುತ್ತದೆ. ಕೊರೋನಾದಿಂದ ಗುಣಮುಖರಾಗಿದ್ದೇವೆ. ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡಿದ್ದವರಿಗೂ ಮ್ಯೂಕರ್ ಮೈಕೋಸಿಸ್ ಸೋಂಕು ಅಪಾಯ ಉಂಟು ಮಾಡಬಹುದಾಗಿದೆ.
ಕೊರೋನಾಗೆ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದವರಿಗೆ ಕಾಯಿಲೆ ಅಟ್ಯಾಕ್ ಆಗಬಹುದು. ಮೂಗು, ಮೆದುಳು, ಕಣ್ಣು, ಶ್ವಾಸಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ನರವ್ಯೂಹ ನಿಷ್ಕ್ರಿಯತೆ, ದೃಷ್ಟಿಹೀನತೆಯಾಗಿ, ಮೆದುಳು ರಕ್ತ ಹೆಪ್ಪುಗಟ್ಟುತ್ತದೆ. ರೋಗನಿರೋಧಕ ಶಕ್ತಿ ಇಲ್ಲದವರಿಗೆ ಇದು ಹಾನಿಯನ್ನುಂಟುಮಾಡುತ್ತದೆ. ದೆಹಲಿಯಲ್ಲಿ ಕಳೆದ 15 ದಿನದಲ್ಲಿ 12 ಜನರಿಗೆ ಮ್ಯಕರ್ ಮೈಕೋಸಿಸ್ ಸೋಂಕು ಬಂದಿದೆ ಎಂದು ಹೇಳಲಾಗಿದೆ.
ಇದೊಂದು ಶಿಲೀಂದ್ರ ರೋಗವಾಗಿದ್ದು, ಸೌಮ್ಯ ಲಕ್ಷಣಗಳಿದ್ದರೂ ಕೂಡ ಗಂಭೀರ ತಿರುವು ಪಡೆಯಬಹುದಾಗಿದೆ. ಕೊರೋನಾದಿಂದ ಗುಣಮುಖರಾದ ನಂತರವೂ ಇಂತಹ ಯಾವುದೇ ಕಾಯಿಲೆ ಲಕ್ಷಣ ಕಂಡು ಬಂದಲ್ಲಿ ವೈದ್ಯರ ಸಲಹೆ, ಚಿಕಿತ್ಸೆ ಪಡೆಯುವುದು ಒಳ್ಳೆಯದು ಎನ್ನಲಾಗಿದೆ.