ಆಪಲ್ ಬಳಕೆದಾರೆಯಾಗಿದ್ದ ಜೆಸ್ಸಿಕಾ ಜಾನ್ಸನ್ ಎಂಬಾಕೆ ತನ್ನ ಖಾತೆಯಿಂದ ಆಪಲ್ ಕಂಪನಿಗೆ ಬರೋಬ್ಬರಿ 11 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದನ್ನ ಕಂಡು ಹೌಹಾರಿದ್ದಾಳೆ.
ಆದರೆ ಈಕೆಯ ಹಣ ಡೆಬಿಟ್ ಕಾರ್ಡ್ ಇಲ್ಲವೇ ಕ್ರೆಡಿಟ್ ಕಾರ್ಡ್ನ್ನ ಹ್ಯಾಕ್ ಮಾಡಿ ವಂಚಿಸಿದ್ದಲ್ಲ. ಬದಲಾಗಿ ಆಕೆಯ 6 ವರ್ಷದ ಮಗ ಜಾರ್ಜ್ ಜೋನ್ಸನ್ ಆಪಲ್ ಅಪ್ಲಿಕೇಶನ್ ಸ್ಟೋರ್ನಿಂದ ಖರೀದಿ ಮಾಡೋಕೆ ತಾಯಿಗೆ ಗೊತ್ತಿಲ್ಲದಂತೆ ಇಷ್ಟು ದೊಡ್ಡ ಮೊತ್ತದ ಹಣವನ್ನ ಖರ್ಚು ಮಾಡಿದ್ದಾನೆ.
ಜೆಸ್ಸಿಕಾಳ ಪುತ್ರ ಜಾರ್ಜ್ ತನ್ನ ಐಪ್ಯಾಡ್ ಬಳಸಿ ಆಪಲ್ ಪ್ಲೇ ಸ್ಟೋರ್ನಲ್ಲಿ ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಜುಲೈ ತಿಂಗಳಲ್ಲಿ ಆಕೆಯ ಖಾತೆಯಿಂದ ಹಣವನ್ನ ಡೆಬಿಟ್ ಮಾಡಲಾಗಿತ್ತು. ಜೆಸ್ಸಿಕಾ ಮೊದಲು ಇದು ಹ್ಯಾಕರ್ಸ್ ಕೆಲಸ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಮಗನ ಕಿತಾಪತಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಆಪಲ್ ಸಂಸ್ಥೆ ಹಣವನ್ನ ವಾಪಾಸ್ ನೀಡಲು ನಿರಕರಿಸಿದೆ.