alex Certify ಬಲೆಗೆ ಬಿದ್ದಿದ್ದ ದೈತ್ಯ ಶಾರ್ಕ್ ರಕ್ಷಿಸಿದ ಮೀನುಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೆಗೆ ಬಿದ್ದಿದ್ದ ದೈತ್ಯ ಶಾರ್ಕ್ ರಕ್ಷಿಸಿದ ಮೀನುಗಾರರು

ತಿರವನಂತಪುರದ ಸುಮಾರು 60ಕ್ಕೂ ಹೆಚ್ಚು ಮೀನುಗಾರರು ಸೇರಿ ಬಲೆಗೆ ಬಿದ್ದ ಅಳಿವನಂಚಿನ ದೈತ್ಯ ಶಾರ್ಕ್​ನ್ನ ಸಮುದ್ರಕ್ಕೆ ವಾಪಸ್​ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಂಡಮಾರುತದದ ಭೀತಿ ಹಿನ್ನೆಲೆ ಆಳ ಸಮುದ್ರ ಮೀನುಗಾರಿಕೆಗೆ ಕೇರಳದಲ್ಲಿ ನಿಷೇಧ ಹೇರಲಾಗಿದೆ. ಹೀಗಾಗಿ ಕೆಲ ಮೀನುಗಾರರು ಸಮುದ್ರ ತಟದ ಬದಿಯಲ್ಲೇ ಬಲೆ ಹಾಕಿದ್ದರು. ಈ ವೇಳೆ ದೈತ್ಯ ಶಾರ್ಕ್​​ ಅವರ ಬಲೆಗೆ ಸಿಕ್ಕಿ ಹಾಕಿಕೊಂಡಿತ್ತು.

ದೈತ್ಯ ಮೀನನ್ನ ವಾಪಸ್​ ಸಮುದ್ರಕ್ಕೆ ಬಿಡಲು ನಿರ್ಧರಿಸಿದ ಸುಮಾರು 60ಕ್ಕೂ ಹೆಚ್ಚು ಮೀನುಗಾರರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.

ಆರಂಭದಲ್ಲಿ ಮೀನುಗಾರರು ಶಾರ್ಕ್​ ಬದುಕುಳಿಯೋದು ಕಷ್ಟ ಅಂತಾನೇ ಭಾವಿಸಿದ್ರು. ಆದರೆ ಮೀನುಗಾರರ ಅವಿರತ ಪರಿಶ್ರಮದ ಬಳಿಕ ಶಾರ್ಕ್​ ಸೇಫ್​ ಆಗಿ ಸಮುದ್ರದಾಳಕ್ಕೆ ಹೋಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅಧಿಕಾರಿ ಶಾಜಿ ಜೋನ್​, ದೈತ್ಯ ಶಾರ್ಕ್ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ. ಶಾರ್ಕ್​ನ್ನ ರಕ್ಷಿಸಿದ ಮೀನುಗಾರರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ರು.

— Sneha Koshy (@SnehaMKoshy) December 5, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...