ಈ ವರ್ಷದ ಆರಂಭದಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಪಿಟೀಲು ನುಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅನೇಕರು ಇದು ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಎಂದೇ ಹೇಳಿದ್ದರು.
ಆದರೆ ಈ ಪ್ರಯೋಗವನ್ನ ವೈದ್ಯಕೀಯ ಉದ್ದೇಶಕ್ಕಾಗಿಯೇ ಮಾಡಲಾಗಿತ್ತು.
ಐಲ್ ಆಫ್ ವೈಟ್ ಸಿಂಫನಿ ಆರ್ಕೆಸ್ಟ್ರಾದಲ್ಲಿ ಪಿಟೀಲು ವಾದಕಿಯಾಗಿದ್ದ ಮಹಿಳೆ ಜನವರಿ 31ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆ ವೇಳೆ ನೀಡಲಾಗುವ ಅರವಳಿಕೆಯಿಂದ ತನ್ನ ಕೈ ಚಲನೆ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎಂಬುದನ್ನ ಖಚಿತಪಡಿಸಿಕೊಳ್ಳಲು ಆಕೆ ಪಿಟೀಲನ್ನ ನುಡಿಸಿದ್ದಾಳೆ.
ಇದೀಗ ಈ ಸಾಲಿಗೆ ಗ್ವಾಲಿಯರ್ನ ಬಾಲಕಿಯೊಬ್ಬಳು ಸೇರಿದ್ದು ಭಾನುವಾರ ಬಿಐಎಂಆರ್ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಳೆ ಇಂತಹದ್ದೇ ಸಾಹಸ ಮಾಡಿದ್ದಾಳೆ.
ಸೌಮ್ಯ ಎಂಬ ಹೆಸರಿನ ಹೆಣ್ಣುಮಗಳು ಮೆದುಳಿನ ಗಡ್ಡೆ ತೆಗೆದು ಹಾಕುವ ಶಸ್ತ್ರಚಿಕಿತ್ಸೆ ವೇಳೆ ಪ್ರಜ್ಞಾವಸ್ಥೆಯಲ್ಲಿದ್ದಳು ಹಾಗೂ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ವೇಳೆ ಸಿಂಥೆಸೈಜರ್ನ್ನು ನುಡಿಸಿದ್ದಾಳೆ.
ಸೌಮ್ಯಳನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವೇಳೆ ಈಕೆಗೆ ಮೆದುಳು ಶಸ್ತ್ರಚಿಕಿತ್ಸೆ ಮಾಡೋದು ತುಂಬಾನೆ ಅಪಾಯಕಾರಿ. ಗಡ್ಡೆ ತೆಗೆಯುವ ವೇಳೆ ಮೆದುಳಿನ ನರಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಳು. ಇದೇ ಕಾರಣಕ್ಕೆ ಆಕೆಯನ್ನ ಪೂರ್ಣ ಪ್ರಜ್ಞಾವಸ್ತೆಯಲ್ಲಿಟ್ಟುಕ್ಕೊಂಡೇ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನಿಸಲಾಯ್ತು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಸೌಮ್ಯ, ನಾನು 6 ಗಂಟೆಗಳ ಕಾಲ ಪಿಯಾನೋ ನುಡಿಸಿದೆ. ಹಾಗೂ ಮೊಬೈಲ್ ಗೇಮ್ಗಳನ್ನ ಆಡಿದೆ. ನಾನೀಗ ಆರಾಮಾಗಿದ್ದೇನೆ ಎಂದು ಹೇಳಿದ್ರು.