ಉಡುಪಿ: 2 ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ 7 ಜನ ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಬೋಟ್ ಮುಳುಗಡೆಯಾಗಿದ್ದು ಹೇಗೆ? ಅದರಲ್ಲಿ ಮೀನುಗಾರರು ಇದ್ದಾರೆಯೇ? ಎನ್ನುವುದು ಇನ್ನೂ ಗೊತ್ತಾಗಿಲ್ಲ. ನಾಪತ್ತೆಯಾಗಿದ್ದ ಮೀನುಗಾರರು ಬದುಕಿದ್ದಾರೆ, ಬರುತ್ತಾರೆ ಎನ್ನುವ ನಿರೀಕ್ಷೆ ಕುಟುಂಬದವರಲ್ಲಿದ್ದು ಸಂಕಷ್ಟದಿಂದ ಜೀವನ ನಡೆಸುತ್ತಿದ್ದಾರೆ.
2018 ರ ಡಿಸೆಂಬರ್ 13 ರಂದು ಮಲ್ಪೆ ಬಂದರಿನಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಡಿಸೆಂಬರ್ 15 ರಾತ್ರಿಯಿಂದ ಸಂಪರ್ಕ ಕಳೆದುಕೊಂಡಿತ್ತು. ಬೋಟ್ ಮತ್ತು ಮೀನುಗಾರರ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗಿತ್ತು. ಮೇ 1 ರಂದು ಮಾಲ್ಟನ್ ತೀರದಿಂದ ಸುಮಾರು 33 ಕಿಲೋಮೀಟರ್ ದೂರದ 64 ಮೀಟರ್ ಆಳದಲ್ಲಿ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾಗಿತ್ತು. ಆದರೆ, ಮೀನುಗಾರರ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಅಂದಿನಿಂದಲೂ ಮೀನುಗಾರರ ಕುಟುಂಬದವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಕುಟುಂಬದವರು ಬರುವ ನಿರೀಕ್ಷೆಯಲ್ಲಿಯೇ ಸಂಕಷ್ಟದಿಂದ ಜೀವನ ನಡೆಸುತ್ತಿದ್ದಾರೆ.