ನವದೆಹಲಿ: ಪ್ರಧಾನ ಮಂತ್ರಿ ಪಿಂಚಣಿ ಯೋಜನೆಯಡಿ ಜನರಿಗೆ 70 ಸಾವಿರ ರೂಪಾಯಿ ಪಿಂಚಣಿ ನೀಡಲಾಗುವುದು ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಕೇಂದ್ರ ಮಾಹಿತಿ ಇಲಾಖೆಯಿಂದ ಈ ಕುರಿತು ಸ್ಪಷ್ಟನೆ ನೀಡಲಾಗಿದ್ದು, ಇಂತಹ ಸಂದೇಶಗಳನ್ನು ನಂಬದಂತೆ ತಿಳಿಸಲಾಗಿದೆ. ಹಲವರ ಮೊಬೈಲ್ ಗೆ ಈ ಕುರಿತಾದ ಸಂದೇಶಗಳು ಬರುತ್ತಿವೆ. ‘ಅಭಿನಂದನೆಗಳು, ನೀವು ಪ್ರಧಾನಮಂತ್ರಿಯವರ 70 ಸಾವಿರ ರೂಪಾಯಿ ಪಿಂಚಣಿ ಯೋಜನೆಗೆ ಆಯ್ಕೆಯಾಗಿದ್ದೀರಿ ಎನ್ನುವ ಸಂದೇಶದ ಜೊತೆಗೆ ಲಿಂಕ್ ಕಳುಹಿಸಲಾಗುತ್ತಿದೆ. ಇದು ಜನರನ್ನು ಆನ್ಲೈನ್ ಮೂಲಕ ವಂಚಿಸಿ ಹಣ ದೋಚುವ ಕೃತ್ಯವಾಗಿದ್ದು, ಇಂತಹ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾರೂ ಮೋಸ ಹೋಗಬಾರದು ಎಂದು ಕೇಂದ್ರ ಮಾಹಿತಿ ಇಲಾಖೆ ತಿಳಿಸಿದೆ.