ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ಪದಚ್ಯುತಿಗೆ ಬಿಜೆಪಿ ಪ್ರಯತ್ನ ನಡೆಸಿದ್ದು, ಅವಿಶ್ವಾಸ ಚರ್ಚೆಗೆ ಅವಕಾಶವನ್ನು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ನೀಡಿಲ್ಲ. ಇಂದು ಒಂದು ದಿನದ ವಿಧಾನ ಪರಿಷತ್ ಕಲಾಪ ನಡೆಯಲಿದ್ದು, ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ.
ಇಂದಿನ ಪರಿಷತ್ ಕಲಾಪದಲ್ಲಿ ಸಭಾಪತಿ ಪೀಠದಲ್ಲಿ ಕೂರದಂತೆ ಬಿಜೆಪಿ ಸದಸ್ಯರು ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ. ಉಪ ಸಭಾಪತಿ ಮತ್ತು ಕಾರ್ಯದರ್ಶಿಯವರಿಗೂ ಬಿಜೆಪಿ ಸದಸ್ಯರು ಪತ್ರ ಬರೆದಿದ್ದಾರೆ.
ಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಹಿನ್ನೆಲೆಯಲ್ಲಿ ಸಭಾಪತಿ ಪೀಠದಲ್ಲಿ ಪ್ರತಾಪಚಂದ್ರ ಶೆಟ್ಟಿ ಕೂರದಂತೆ ಪತ್ರ ಬರೆಯಲಾಗಿದ್ದು, ಉಪಸಭಾಪತಿ ಪರಿಷತ್ ಕಲಾಪವನ್ನು ನಡೆಸಬೇಕೆಂದು ಕೋರಲಾಗಿದೆ. ಸಭಾಪತಿ ವಿರುದ್ಧ ನೀಡಲಾಗಿರುವ ಅವಿಶ್ವಾಸ ನಿರ್ಣಯವನ್ನು ಕೈಗೆತ್ತಿಕೊಂಡು ಮತಕ್ಕೆ ಹಾಕುವಂತೆ ಸಭಾಪತಿ, ಉಪಸಭಾಪತಿ ಮತ್ತು ಕಾರ್ಯದರ್ಶಿಗಳಿಗೆ ಬಿಜೆಪಿ ಸದಸ್ಯರು ಪತ್ರ ಬರೆದು ಮನವಿ ಮಾಡಿದ್ದಾರೆನ್ನಲಾಗಿದೆ.