ನವದೆಹಲಿ: ಕೊರೋನಾ ವ್ಯಾಕ್ಸಿನ್ ಹಂಚಿಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜನರಿಗೆ ಲಸಿಕೆ ನೀಡಬೇಕಿದೆ.
ಕೊರೋನಾ ವಾರಿಯರ್ಸ್ ಗೆ ಮೊದಲ ಆದ್ಯತೆ ನೀಡಬೇಕು. ವೈದ್ಯರು, ನರ್ಸ್ ಗಳು ಕೊರೋನಾ ವಾರಿಯರ್ಸ್ ಗಳಾಗಿದ್ದು, ಅವರಿಗೆ ಮೊದಲ ಆದ್ಯತೆ. ನಂತರ ಫ್ರಂಟ್ ಲೈನ್ ವರ್ಕರ್ಸ್ ಗೆ ಎರಡನೇ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು.
ಬೇರೆ ಬೇರೆ ರೋಗಗಳಿಂದ ಬಳಲುವವರು ಹಾಗೂ 50ತ್ತು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೂರನೇ ಆದ್ಯತೆ, 50 ವರ್ಷಕ್ಕಿಂತ ಕೆಳಗಿರುವವರಿಗೆ 4ನೇ ಆದ್ಯತೆಯಾಗಿ ಲಸಿಕೆ ನೀಡಲಾಗುವುದು. ಹೀಗೆ ಹಲವು ಮಾಹಿತಿ ಒಳಗೊಂಡ 119 ಪುಟಗಳ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.