alex Certify BIG NEWS: ಕೋವಿಡ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿ

ಮಾರಣಾಂತಿಕ ಕೊರೊನಾ ವೈರಸ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿಯಾದ ಆಂಟಿ ವೈರಲ್​ ಲಸಿಕೆ ಎಂದು ಅಧ್ಯಯನವೊಂದು ಹೇಳಿದೆ. ಕೋವಿಡ್​ 19ನಿಂದ ಅಸ್ವಸ್ಥನಾದ ರೋಗಿಗೆ ಈ ರೆಮಿಡಿಸಿವರ್ ಲಸಿಕೆ ನೀಡಿದ ಬಳಿಕ ಆತನ ದೇಹದಲ್ಲಿ ಸುಧಾರಣೆ ಕಂಡಿದ್ದು ಮಾತ್ರವಲ್ಲದೇ ವೈರಸ್​ ಕ್ರಮೇಣವಾಗಿ ದೇಹದಿಂದ ಕಣ್ಮರೆಯಾಗೋದನ್ನ ಯುಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಗಮನಿಸಿದ್ದಾರೆ.

ವಿಜ್ಞಾನಿಗಳು ಈ ಹಿಂದೆಯೂ ರೆಮಿಡಿಸಿವರ್​​ ಮೇಲೆ ಭರವಸೆ ಹೊಂದಿದ್ದರು. ಈ ಲಸಿಕೆಯನ್ನ ಮೂಲತಃ ಹೆಪಟೈಟಿಸ್​ ಸಿ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾಗಿತ್ತು ಬಳಿಕ ಎಬೋಲಾ ವಿರುದ್ಧವೂ ಈ ಲಸಿಕೆಯನ್ನ ಪರೀಕ್ಷಿಸಲಾಯಿತು.

ಆದರೆ ರೆಮಿಡಿಸಿವರ್​ ದೊಡ್ಡ ಪ್ರಮಾಣದ ಕ್ಲಿನಿಕಲ್​ ಪ್ರಯೋಗಳ ಫಲಿತಾಂಶದಲ್ಲಿ ಪರಿಣಾಮಕಾರಿಯಾದ ಫಲಿತಾಂಶ ನೀಡಿಲ್ಲ. ಅಲ್ಲದೇ ಈ ಲಸಿಕೆಯು ಮರಣ ಪ್ರಮಾಣವನ್ನ ಗಮನಾರ್ಹವಾಗಿ ಕಡಿಮೆ ಮಾಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್​ನಲ್ಲಿ ಘೋಷಣೆ ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...