ಗೂಗಲ್ ನ ಪ್ರಮುಖ ಸೇವೆಗಳಾದ ಜಿಮೇಲ್, ಯುಟ್ಯೂಬ್, ಡಾಕ್ಸ್, ಮ್ಯಾಪ್ ಗಳನ್ನು ದೈನಂದಿನ ಕೆಲಸಕ್ಕಾಗಿ ಬಳಸುತ್ತಿದ್ದವರಿಗೆ ಸಮಸ್ಯೆಯೊಂದು ಆರಂಭವಾಗಿದೆ. ಗೂಗಲ್ ಸರ್ವರ್ ಡೌನ್ ಸಮಸ್ಯೆ ಎದುರಿಸುತ್ತಿದ್ದು, ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೂಗಲ್ ಡಾಕ್ಸ್ ಬಳಕೆದಾರರಿಗೆ ಎರರ್ ಎಂದು ಬರುತ್ತಿದ್ದರೆ, ಯೂಟ್ಯೂಬ್ ನಲ್ಲಿ ಕೂಡ ಇಂತದ್ದೇ ಸಮಸ್ಯೆ ಎದುರಾಗಿದೆ. ಹೀಗಾಗಿ ಬಳಕೆದಾರರು # Googledown ಹ್ಯಾಷ್ ಟ್ಯಾಗ್ ನೊಂದಿಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಯೂಟ್ಯೂಬ್ , ಸೇವೆಯಲ್ಲಿ ವ್ಯತ್ಯಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಸರಿಪಡಿಸುವುದಾಗಿ ಹೇಳಿದೆ.