ಗುಜರಾತ್ನಲ್ಲಿ ನಿರ್ಮಾಣವಾಗಲಿರುವ ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್ 30 ಗಿಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಲಿದೆ.
ಗುಜರಾತ್ನನ ಕಚ್ ಜಿಲ್ಲೆಯ ವಿಘಕೋಟ್ ಗ್ರಾಮದ ಬಳಿ ಇರುವ ಹೈಬ್ರಿಡ್ ನವೀಕರಿಸಬಹುದಾದ ಇಂಧನ ಉದ್ಯಾನವನಕ್ಕೆ ಪ್ರಧಾನ ನರೇಂದ್ರ ಮೋದಿ ಅಡಿಪಾಯ ಹಾಕಲಿದ್ದಾರೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನೆ ಪಾರ್ಕ್ 72,600 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಗಾಳಿ ಹಾಗೂ ಸೌರಶಕ್ತಿ ಸಂಗ್ರಹಣೆಗೆ ಮೀಸಲು ವಲಯವನ್ನ ಈ ಘಟಕ ಹೊಂದಿದೆ.
ಗುಜರಾತ್ನಲ್ಲಿರುವ ಕಚ್ನಲ್ಲಿ ಸಮುದ್ರದ ನೀರನ್ನ ಕುಡಿಯುವ ನೀರನ್ನಾಗಿ ಪರಿವರ್ತಿಸುವ ವಿಚಾರದಲ್ಲಿ ಮಹತ್ವದ ಹೆಜ್ಜೆಯನ್ನ ಇಡುತ್ತಿದೆ. ಇದು ದೇಶದಲ್ಲಿ ಸುಸ್ಥಿರ ಮತ್ತು ಕೈಗೆಟುಕುವ ಜಲ ಸಂಪನ್ಮೂಲ ಕೊಯ್ಲಿಗೆ ಪ್ರಮುಖ ಮೈಲಿಗಲ್ಲಾಗಲಿದೆ.