ಫೈಜರ್ ಕೋವಿಡ್ ಲಸಿಕೆಯನ್ನು ಜರ್ಮನ್ ಕಂಪನಿ ಬಯೋಟೆಕ್ ಸಹಭಾಗಿತ್ವದಲ್ಲಿ ಬಳಕೆ ಮಾಡುವ ಪ್ರಮುಖ ಸಿಡಿಸಿ ಸಲಹಾ ಗುಂಪಿನ ಶಿಫಾರಸ್ಸಿಗೆ ಸಹಿ ಹಾಕಿದ್ದೇವೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆಯಿಂದ ತತ್ತರಿಸಿರುವ ಅಮೆರಿಕದಲ್ಲಿ ಸೋಮವಾರದಿಂದ ಕೊರೊನಾ ಲಸಿಕೆ ಬಳಕೆ ಪ್ರಾರಂಭವಾಗಲಿದೆ. ಈ ವಿಚಾರವಾಗಿ ಭಾನುವಾರ ಮಾತನಾಡಿದ ರೆಡ್ಫೀಲ್ಡ್ 16 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕೊರೊನಾ ಲಸಿಕೆ ಬಳಕೆ ಮಾಡುವ ಸಲಹಾ ಸಮಿತಿಗೆ ಸಹಿ ಹಾಕಲು ಹೆಮ್ಮೆಯಾಗುತ್ತಿದೆ ಎಂದು ಸಂತಸ ಹೊರಹಾಕಿದ್ರು.
ಅಮೆರಿಕ ಚುನಾವಣೆ ಬಳಿಕ ದೇಶದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದೆ. ಕಳೆದ ವಾರವಂತೂ ಅಮೆರಿಕದಲ್ಲಿ ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ದಿನಕ್ಕೆ ಸರಾಸರಿ 2500 ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಫೈಜರ್ ಲಸಿಕೆ ಬಳಕೆಗೆ ಅಮೆರಿಕದಲ್ಲಿ ಅವಕಾಶ ಸಿಕ್ಕಿದ್ದು ಜನರಲ್ಲಿ ಕೊರೊನಾ ಸಂಕಷ್ಟ ಕಡಿಮೆಯಾಗುತ್ತದೆಂಬ ಭರವಸೆ ಮೂಡಿದೆ.