ಬೆಂಗಳೂರು: ಮನೆ ಹೊಂದುವ ಆಸೆಯಿಂದ ರೆವೆನ್ಯೂ ಸೈಟ್ ಖರೀದಿಸಿದ ಲಕ್ಷಾಂತರ ಮಂದಿ ಸಂಕಷ್ಟ ಎದುರಿಸುವಂತಾಗಿದೆ.
ರೆವಿನ್ಯೂಸೈಟ್ ನೋಂದಣಿ ನಿರ್ಬಂಧದಿಂದ ಗ್ರಾಹಕರಿಗೆ ತೊಂದರೆ ಎದುರಾಗಿದೆ. ನಿವೇಶನದಲ್ಲಿ ಮನೆ ಕಟ್ಟುವಂತಿಲ್ಲ. ಮಾರುವಂತೆಯೂ ಇಲ್ಲದಂತಹ ಪರಿಸ್ಥಿತಿ ಇದೆ.
ಕೃಷಿಯೇತರ ಬಳಕೆಗೆ ಎಂದು ಕನ್ವರ್ಷನ್ ಆಗದ ಜಮೀನನ್ನು ಸೈಟ್ ಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ. ಇಂತಹ ಜಾಗದಲ್ಲಿ ಮನೆ ನಿರ್ಮಾಣ, ವಾಣಿಜ್ಯ ಬಳಕೆಗೆ ಅವಕಾಶ ಇರುವುದಿಲ್ಲ. ರೆವಿನ್ಯೂ ಸೈಟ್ ಗಳ ರಚನೆ, ಮಾರಾಟ, ನೋಂದಣಿಯಿಂದ ಸಮಸ್ಯೆ ಎದುರಾಗುತ್ತದೆ ಎನ್ನುವ ಕಾರಣದಿಂದ ಸರ್ಕಾರ ನಿರ್ಬಂಧ ಹೇರಿದೆ.
ಕಡಿಮೆ ದರದಲ್ಲಿ ನಿವೇಶನ ಸಿಗುತ್ತದೆ ಎನ್ನುವ ಕಾರಣಕ್ಕೆ ರೆವೆನ್ಯೂ ಸೈಟ್ ಖರೀದಿಸಿದವರು ನೋಂದಣಿ ಸಮಸ್ಯೆ ಎದುರಿಸುವಂತಾಗಿದೆ. ಅಂತವರಿಗೆ ಮನೆ ಕಟ್ಟಲು ಅನುಮತಿ ಸಿಗದಂತಾಗಿದೆ. ಅಲ್ಲದೆ, ಸೈಟ್ ಮಾರಲು ಮುಂದಾದರೆ ಮಾರಾಟವೂ ಆಗುತ್ತಿಲ್ಲ. ಇದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಲಾಗಿದೆ.