ಇರಾನ್: ಹಾಲಿವುಡ್ ನಟಿ ಏಂಜಲಿನಾ ಜೂಲಿಯಂತೆ ಕಾಣಬೇಕೆಂದು ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದ ಇರಾನ್ ಮೂಲದ ಯುವತಿ ಸಹರ್ ತಬಾರ್ ಗೆ ಇದೀಗ 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.
ಇನ್ ಸ್ಟಾಗ್ರಾಂ ತಾರೆಯಾಗಿರುವ 19 ವರ್ಷದ ಸಹರ್ ತಬಾರ್, ಏಂಜಲಿನಾ ಜೂಲಿ ಅವರನ್ನು ಹೋಲುವ ಜೊಂಬಿ ಆವೃತ್ತಿಯ ವಿಲಕ್ಷಣ ಮುಖದ ಮಾರ್ಫಡ್ ಫೋಟೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದಳು. ಅಲ್ಲದೇ ಹಲವು ಕಾಸ್ಮೆಟಿಕ್ ಸರ್ಜರಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದಳು.
ಕಳೆದ ಅಕ್ಟೋಬರ್ ನಲ್ಲಿ ಸಹರ್ ಕೆಲ ಧರ್ಮ ನಿಂದನೆಯ ಪೋಸ್ಟ್ ಕೂಡ ಮಾಡಿದ್ದಳು. ಅಲ್ಲದೇ ತನ್ನ ನೆಚ್ಚಿನ ಹಾಲಿವುಡ್ ನಟಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಕಠಿಣ ಡಯಟ್ ನಲ್ಲೂ ಈಕೆ ಇದ್ದಳು ಎಂಬ ಆರೋಪ ಕೂಡ ಕೇಳಿಬಂದಿದೆ. ಇದೀಗ ಸಹರ್ ತಬಾರ್ ಗೆ ನ್ಯಾಯಾಲಯ 10 ವರ್ಷ ಜೈಲುಶಿಕ್ಷೆ ವಿಧಿಸಿದೆ.