alex Certify ನಕಲಿ ಫೇಸ್​ಬುಕ್​ ಖಾತೆಯಲ್ಲಿ ಲವ್ವಿ – ಡವ್ವಿ: ದೆಹಲಿ ಪೊಲೀಸರಿಂದ ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಫೇಸ್​ಬುಕ್​ ಖಾತೆಯಲ್ಲಿ ಲವ್ವಿ – ಡವ್ವಿ: ದೆಹಲಿ ಪೊಲೀಸರಿಂದ ಆರೋಪಿ ಅರೆಸ್ಟ್

ಫೇಸ್​​ಬುಕ್​ನಲ್ಲಿ ನಕಲಿ ಖಾತೆ ರಚಿಸಿ ಅಪ್ರಾಪ್ತೆಯೊಂದಿಗೆ ಮದುವೆಯಾಗೋಕೆ ಹೊರಟಿದ್ದ 18 ವರ್ಷದ ಯುವಕನನ್ನ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್​ 23 ರಂದು ನಾಪತ್ತೆಯಾಗಿದ್ದ ಬಾಲಕಿ ಇದೀಗ ಮನೆಗೆ ವಾಪಸ್ಸಾಗಿದ್ದಾಳೆ.

ರಾಜಸ್ಥಾನದ ಅಲ್ವಾರ್​ನ ರತ್ನಕಿ ಗ್ರಾಮದ ಶೋಯಬ್​ ಖಾನ್​​ ಅಕ್ಟೋಬರ್​ 22ರಂದು ದೆಹಲಿ ತಲುಪಿದ್ದು, ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಬಳಿ ಮದುವೆಯಾಗು ಎಂದು ಪೀಡಿಸಿದ್ದಾನೆ. ಬಳಿಕ ಆಕೆಯನ್ನ ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಕರೆದೊಯ್ದು ಅಕ್ಟೋಬರ್​ 26 ರಂದು ಆಕೆಯನ್ನ ಬಾದರ್​ಪುರ ಗಡಿಯಲ್ಲಿ ಆಟೋ ರಿಕ್ಷಾದಲ್ಲಿ ಕೂರಿಸಿ ಪರಾರಿಯಾಗಿದ್ದ.

ಬಾಲಕಿ ತಂದೆ ಅಕ್ಟೋಬರ್ 23 ರಂದು ರಾಜೌರಿ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿಯ ಸಾಮಾಜಿಕ ಮಾಧ್ಯಮಗಳ ಖಾತೆಯನ್ನ ಪರಿಶೀಲಿಸಿದ್ದಾರೆ. ಈ ವೇಳೆ ಆಕೆ ಹೆಚ್ಚು ಬಾರಿ ಎಸ್​.ಕೆ ಸಿನ್ಹಾ ಎಂಬ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದಳು ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆಯಲ್ಲಿ ಇದು ಶೋಯಬ್​ ಖಾನ್​ ರಚಿಸಿದ್ದ ನಕಲಿ ಖಾತೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಶೋಯಬ್​ ವಾಸವಿದ್ದ ಗ್ರಾಮಕ್ಕೆ ತೆರಳಿದ ಪೊಲೀಸರು ಆತನನ್ನ ಬಾದರ್​ಪುರ ಗಡಿ ಬಳಿ ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...