ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆ ಪ್ರಯೋಗಗಳು ಮುಂದುವರೆದಿದ್ದು, ಫೈಝರ್ ಲಸಿಕೆ ತುರ್ತು ಪ್ರಯೋಗ ಆರಂಭವಾಗಿದೆ.
ಫೈಝರ್-ಬಯೋನ್ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ವ್ಯಾಕ್ಸಿನ್ ತುರ್ತು ಬಳಕೆಯನ್ನು ಈಗಾಗಲೇ ಬ್ರಿಟನ್ ಆರಂಭಿಸಿದ್ದು, ಇದೀಗ ಅಮೆರಿಕ ಕೂಡ ಈ ಲಸಿಕೆ ಪ್ರಯೋಗಕ್ಕೆ ಸಮ್ಮಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಲಸಿಕೆ ತುರ್ತು ಬಳಕೆ ಅಮೆರಿಕಾದಲ್ಲೂ ಆರಂಭವಾಗಿದೆ.
ಮುಂದಿನ 24 ಗಂಟೆಯಲ್ಲಿ ಮೊದಲ ಲಸಿಕೆ ನೀಡಲಾಗುತ್ತಿದ್ದು, ಯಾರು ಯಾರಿಗೆ ಲಸಿಕೆ ಕೊಡಬೇಕು ಎಂಬ ಬಗ್ಗೆ ಆಯಾ ರಾಜ್ಯಗಳ ಗವರ್ನರ್ ಗಳು ನಿರ್ಧರಿಸುತ್ತಾರೆ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.