ಪೈಜರ್- ಬಯೋಟೆಕ್ ತಯಾರಿಸಿರುವ ಕೋವಿಡ್ 19 ಲಸಿಕೆ ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ತಡರಾತ್ರಿ ಹಸಿರು ನಿಶಾನ ತೋರಿದೆ. ಈ ಮೂಲಕ ಕೊರೊನಾ ಹೊಡೆತಕ್ಕೆ ಸಿಲುಕಿದ ವಿಶ್ವದ ದೊಡ್ಡಣ್ಣನಿಗೆ ಡೆಡ್ಲಿ ವೈರಸ್ ವಿರುದ್ಧ ಹೋರಾಡಲು ಹೊಸ ಮಾರ್ಗ ಸಿಕ್ಕಂತಾಗಿದೆ.
ಲಸಿಕೆಗೆ ತುರ್ತು ಅನುಮೋದನೆ ಸಿಗುತ್ತಿದ್ದಂತೆಯೇ ಟ್ವೀಟಾಯಿಸಿದ ಡೊನಾಲ್ಡ್ ಟ್ರಂಪ್ ಇದನ್ನ ವೈದ್ಯಕೀಯ ಪವಾಡ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಮುಂದಿನ 24ಗಂಟೆಯೊಳಗಾಗಿ ಲಸಿಕೆ ಬಳಕೆಯಾಗಲಿದೆ ಅಂತಾ ಭರವಸೆ ವ್ಯಕ್ತಪಡಿಸಿದರು.
ಅತಿ ಹೆಚ್ಚು ಕೊರೊನಾ ಸೋಂಕಿತರನ್ನ ಹೊಂದಿರುವ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನವನ್ನ ಪಡೆದಿದೆ. ಬ್ರಿಟನ್, ಬಹರೇನ್, ಕೆನಡಾ, ಸೌದಿ ಅರೇಬಿಯಾ ಹಾಗೂ ಮೆಕ್ಸಿಕೋ ನಂತರ 2 ಡೋಸ್ಗಳ ಲಸಿಕೆ ನೀಡಲು ಅನುಮತಿ ನೀಡಿದ ವಿಶ್ವದ ಆರನೇ ರಾಷ್ಟ್ರ ಅಮೆರಿಕವಾಗಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.