ಲಂಡನ್: ಅನೇಕ ದೇಶಗಳು ಕೊರೋನಾ ಲಸಿಕೆ ನೀಡಲು ಅನುಮತಿ ನೀಡತೊಡಗಿದ್ದು, ಇದರ ಬೆನ್ನಲ್ಲೇ ಮತ್ತೆ ಭರವಸೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಗೂ ಬೇಡಿಕೆ ಹೆಚ್ಚಾಗತೊಡಗಿದೆ.
ಇದೇ ನಿರೀಕ್ಷೆಯಲ್ಲಿ ಕಚ್ಚಾತೈಲದ ದರ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಕಚ್ಚಾ ತೈಲ ದರ 49 ಡಾಲರ್ ದಾಟಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಬ್ರಿಟನ್ ನಲ್ಲಿ ಕೊರೋನಾ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಮೆರಿಕದಲ್ಲಿಯೂ ಶೀಘ್ರವೇ ಸಾರ್ವಜನಿಕರಿಗೆ ಲಸಿಕೆ ನೀಡಲಾಗುವುದು. ಈ ಬೆಳವಣಿಗೆ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಉಂಟುಮಾಡಿದೆ. ಗುರುವಾರ ಕಚ್ಚಾ ತೈಲ ಬೆಲೆ ಶೇಕಡ 0.7 ರಷ್ಟು ಜಾಸ್ತಿಯಾಗಿದ್ದು, ಪ್ರತಿ ಬ್ಯಾರೆಲ್ ಗೆ 49.21 ಡಾಲರ್ ನಷ್ಟು ಹೆಚ್ಚಾಗಿದೆ. ಕೆಲವು ತಿಂಗಳ ಹಿಂದೆ ಉತ್ಪಾದನೆಯನ್ನು ಕಡಿತಗೊಳಿಸಿದ್ದರೂ, ದರ ಏರಿಕೆಯಾಗುವ ರೀತಿ ನೋಡಿಕೊಂಡಿದ್ದ ಒಪೆಕ್ ಉತ್ಪಾದನೆಯನ್ನು ಹೆಚ್ಚು ಮಾಡಿದೆ. ಪ್ರತಿದಿನ 5 ಲಕ್ಷ ಬ್ಯಾರೆಲ್ ನಷ್ಟು ಉತ್ಪಾದನೆ ಜಾಸ್ತಿ ಮಾಡಿದ್ದು, ಇದರ ನಡುವೆಯೂ ಕಚ್ಚಾತೈಲದ ಬೆಲೆ ಏರಿಕೆ ಹಾದಿಯಲ್ಲಿ ಸಾಗಿದೆ.