ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರಿಗೆ ಕೊಲ್ಕತ್ತಾ ಬಳಿ ಕಲ್ಲು ಎಸೆಯಲಾಗಿದ್ದು, ಬಿಜೆಪಿಗರ ಕಣ್ಣು ಕೆಂಪಗಾಗಿಸಿದೆ. ದಾಳಿಯಲ್ಲಿ ಬಿಜೆಪಿ ನಾಯಕರು ಗಾಯಗೊಂಡಿದ್ದು, ಪಶ್ಚಿಮ ಬಂಗಾಳದ ಭದ್ರತಾ ವ್ಯವಸ್ಥೆ ಬಗ್ಗೆ ಬೊಟ್ಟು ಮಾಡಿ ತೋರಿಸುವಂತಾಗಿದೆ. ಇನ್ನು ಘಟನೆ ಸಂಬಂಧ ಗೃಹ ಸಚಿವ ಅಮಿತ್ ಶಾ ವರದಿ ಕೇಳಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ಬೆಂಗಾವಲು ವಾಹನವೆಂದು ಹೇಳಲಾದ ಫೋಟೋಗಳು ವೈರಲ್ ಆಗುತ್ತಿದೆ. ಇನ್ನೂ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆ,ಪಿ ನಡ್ಡಾ, ಇಂದು ನಾವು ಸಭೆಗೆ ಸುರಕ್ಷಿತವಾಗಿ ಬಂದು ತಲುಪಿದ್ದೇವೆ ಅಂದರೆ ಅದಕ್ಕೆ ದುರ್ಗಾ ಮಾತೆಯ ಅನುಗ್ರಹವೇ ಕಾರಣ ಎಂದಿದ್ದಾರೆ.
ಬಿಜೆಪಿ ನಾಯಕರ ಬೆಂಗಾವಲು ವಾಹನಕ್ಕೆ ಕಲ್ಲು ಎಸೆದದ್ದು ಮಾತ್ರವಲ್ಲದೇ, ಬೈಕ್ ಮೇಲಿದ್ದ ಬಿಜೆಪಿ ಕಾರ್ಯಕರ್ತರ ಮೇಲೂ ಕೋಲುಗಳಿಂದ ಹಲ್ಲೆ ನಡೆಸಲಾಗಿದೆ. ದಾಳಿ ನಡೆದ ಸ್ಥಳ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾಗಿದೆ. ‘
ದಾಳಿಯಿಂದ ಮುಕುಲ್ ರಾಯ್ ಹಾಗೂ ಕೈಲಾಶ್ ವಿಜಯ್ ವರ್ಗಿಯಾ ಗಾಯಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆ ಉಂಟು ಮಾಡುವ ಸಂಗತಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಸಹಿಷ್ಣುತೆ ಕೊನೆಗೊಳ್ಳಬೇಕಿದೆ ಅಂತಾ ನಡ್ಡಾ ಗುಡುಗಿದ್ದಾರೆ.