ಸೋನಿಯಾ ಗಾಂಧಿ ಜೀವನ ಚರಿತ್ರೆ ಪಠ್ಯಕ್ರಮಕ್ಕೆ ಸೇರಿಸುವಂತೆ ತೆಲಂಗಾಣ ಸಿಎಂಗೆ ಮನವಿ 10-12-2020 5:55PM IST / No Comments / Posted In: Latest News, India, Live News ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಜೀವನ ಚರಿತ್ರೆಯನ್ನ ತೆಲಂಗಾಣ ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಕೋರಿ ಸಿಎಂ ಕೆ. ಚಂದ್ರಶೇಖರ್ ರಾವ್ಗೆ ಕಾಂಗ್ರೆಸ್ ಪಕ್ಷದ ವಕ್ತಾರರು ಮನವಿ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ 74ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಕೊಡುಗೆ ನೀಡುವ ಸಲುಗಾಗಿ ಎಐಸಿಸಿ ವಕ್ತಾರ ಶ್ರವನ್ ದಾಸೋಜು ಈ ಮನವಿ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಈ ದೇಶಕ್ಕಾಗಿ ಮಾಡಿದ ಸೇವೆ ಹಾಗೂ ಬದ್ಧತೆಯನ್ನ ಗಮನದಲ್ಲಿಟ್ಟುಕ್ಕೊಂಡು ಸೋನಿಯಾ ಗಾಂಧಿಗೆ ಈ ಕೊಡುಗೆ ಮೂಲಕ ಗೌರವಿಸೋದು ನಮ್ಮ ಜವಾಬ್ದಾರಿಯಾಗಿದೆ ಅಂತಾ ಶ್ರವನ್ ದಾಸೋಜು ಹೇಳಿದ್ದಾರೆ. ಗಾಂಧಿ ಬೆಂಬಲವಿಲ್ಲದೇ ತೆಲಂಗಾಣ ಉದಯವಾಗುತ್ತಿರಲಿಲ್ಲ ಎಂಬ ಕೆಸಿಆರ್ ಮಾತನ್ನೇ ಪುನರ್ ಜ್ಞಾಪಿಸಿದ ಶ್ರವಣ್, ಗಾಂಧಿ ಕುಟುಂಬಕ್ಕೆ ನೀವು ಈ ರೀತಿಗೆ ಕೊಡುಗೆ ನೀಡಬಹುದು ಎಂದು ಮನವಿ ಮಾಡಿದ್ದಾರೆ. Telangana: AICC spokesperson Sravan Dasoju requests Telangana Chief Minister K Chandrashekhar Rao to include Congress president Sonia Gandhi's biography in the state school syllabus on the occasion of her 74th birthday yesterday — ANI (@ANI) December 10, 2020