ಎಲ್ಲಾ ಮಾದರಿಯ ಕ್ರಿಕೆಟ್ಗೆ ಪಾರ್ಥಿವ್ ಪಟೇಲ್ ವಿದಾಯ 09-12-2020 5:16PM IST / No Comments / Posted In: Latest News, Sports ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2 ದಶಕಗಳ ಕಾಲ ವೃತ್ತಿಜೀವನ ನಡೆಸಿದ ಬಳಿಕ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. 17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶ ಪಡೆದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಇದೀಗ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. 35 ವರ್ಷದ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಟಿಪ್ಪಣಿ ಬರೆಯುವ ಮೂಲಕ ನಿವೃತ್ತಿಯ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಭಾರತೀಯ ತಂಡವನ್ನ ಪ್ರತಿನಿಧಿಸಲು ತಮ್ಮ 17ನೇ ವಯಸ್ಸಿನಲ್ಲೇ ನನ್ನ ಮೇಲೆ ನಂಬಿಕೆಯಿಟ್ಟಿದ್ದ ಬಿಸಿಸಿಐಗೆ ಪಾರ್ಥಿವ್ ಧನ್ಯವಾದ ಹೇಳಿದ್ದಾರೆ. ಸೌರವ್ ಗಂಗೂಲಿ, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಸೇರಿದಂತೆ ವೃತ್ತಿ ಜೀವನಕ್ಕೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಪಾರ್ಥಿವ್ ಕೃತಜ್ಞತೆ ಸಮರ್ಪಿಸಿದ್ದಾರೆ. ಪಾರ್ಥಿವ್ ಕ್ರಿಕೆಟ್ ಲೋಕದ ವಿದಾಯದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಟ್ವೀಟಿಗರು ಪಾರ್ಥೀವ್ರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ pic.twitter.com/QbqdHX00dR — parthiv patel (@parthiv9) December 9, 2020 https://twitter.com/RohitSh54376033/status/1336564395674009602 https://twitter.com/HRUDANANDABHUE8/status/1336572302356480000