ನಾನೇ ಅಮೆರಿಕ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ದಿನವೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಿಪಬ್ಲಿಕನ್ ಪಕ್ಷದ ಆರೋಪವನ್ನ ಅಮೆರಿಕ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವಿನ ಬಳಿಕ ಡೊನಾಲ್ಡ್ ಟ್ರಂಪ್ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು.
ಅಮೆರಿಕದಲ್ಲಿ ಮುಂದಿನ ಆಡಳಿತವೂ ಟ್ರಂಪ್ದ್ದೇ ಆಗಿರಲಿದೆ ಎಂದು ನಾನು ನಂಬಿದ್ದೇನೆ. ನಮ್ಮ ಅವಧಿಯಲ್ಲಿ ಷೇರು ಮಾರುಕಟ್ಟೆ ಅಭಿವೃದ್ಧಿ, ಉದ್ಯೋಗ ಸಂಖ್ಯೆ ಹೆಚ್ಚಳ, ಸಶಕ್ತ ಮಿಲಿಟರಿ ಸೈನ್ಯ ನಮ್ಮನ್ನ ಮತ್ತೊಮ್ಮೆ ಅಧಿಕಾರದಲ್ಲಿ ಮುಂದುವರೆಸುತ್ತೆ ಎಂದು ಹೇಳಿದ್ದರು.
ಆದರೆ, ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಫಲಿತಾಂಶವನ್ನ ಅಮಾನ್ಯಗೊಳಿಸಬೇಕು ಎಂಬ ರಿಪಬ್ಲಿಕನ್ ಪಕ್ಷದ ಆಸೆಗೆ ಅಮೆರಿಕ ಸುಪ್ರೀಂ ಕೋರ್ಟ್ ತಣ್ಣಿರೆರಚಿದೆ.