ಡೊನಾಲ್ಡ್ ಟ್ರಂಪ್ ಮನವಿ ಬಳಿಕ ಮತ ಮರುಎಣಿಕೆ ಮಾಡಲಾಗಿದ್ದು, ಜೋ ಬಿಡೆನ್ರೇ ಹೆಚ್ಚು ಮತ ಗಳಿಸಿದ್ದಾರೆ ಅಂತಾ ಜಾರ್ಜಿಯಾದ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮತದಾನ ಮರು ಎಣಿಕೆ ಬಳಿಕವೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ರಾಜ್ಯ ಕಾರ್ಯದರ್ಶಿ ರಾಫೆನ್ಸ್ ವರ್ಗರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.
ಜಾರ್ಜಿಯಾ ಕಾನೂನಿನ ಪ್ರಕಾರ, ಸೋತ ಅಭ್ಯರ್ಥಿ ಹಾಗೂ ಗೆಲುವು ದಾಖಲಿಸಿದ ಅಭ್ಯರ್ಥಿಯ ಮಧ್ಯೆ ಮತಗಳ ಅಂತರ 0.5 ಪ್ರತಿಶತದ ಒಳಗಿದ್ದರೆ ಸೋತ ಅಭ್ಯರ್ಥಿ ಮರು ಮತ ಎಣಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರನ್ವಯ ಟ್ರಂಪ್ ಮತ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಎರಡನೇ ಫಲಿತಾಂಶದಲ್ಲೂ ಟ್ರಂಪ್ಗೆ ಮುಖಭಂಗವಾಗಿದೆ .