ಬ್ರಿಟನ್ನಲ್ಲಿ ಕೊರೊನಾ ವಿರುದ್ಧ ಸಿದ್ಧಪಡಿಸಲಾಗಿರುವ ಫೈಜರ್ ಲಸಿಕೆ ಅನುಮೋದನೆ ಬಳಿಕ ಅದನ್ನ ಪಡೆಯುತ್ತಿರುವ ಮೊದಲ ವ್ಯಕ್ತಿ ಭಾರತೀಯ ಮೂಲದ ಹರಿ ಶುಕ್ಲಾ ಆಗಿದ್ದಾರೆ. ಈ ಮೂಲಕ ಹರಿ ಶುಕ್ಲಾ ಕೊರೊನಾ ವಿರುದ್ಧ ಲಸಿಕೆಯನ್ನ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಕೊರೊನಾ ವಿರುದ್ಧ ಫೈಜರ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಈ ಇಂದಿನಿಂದ ಬಳಕೆಗೆ ಯೋಗ್ಯವಿದ್ದು 87 ವರ್ಷದ ಡಾ. ಹರಿ ಶುಕ್ಲಾ ಮತ್ತವರ ಪತ್ನಿ 84 ವರ್ಷದ ರಂಜನ್ ಈ ಲಸಿಕೆಯನ್ನ ಮೊದಲು ಪಡೆಯಲಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹರಿ ಶುಕ್ಲಾ, ಲಸಿಕೆಯನ್ನ ಪಡೆದುಕೊಳ್ತಿದ್ದೇನೆ ಎಂದು ಹೇಳಿಕೊಳ್ಳಲಿಕ್ಕೇನೆ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಅಲ್ಲದೇ ಲಸಿಕೆ ಸ್ವೀಕರಿಸಲು ನಾನು ಸಿಕ್ಕಾಪಟ್ಟೆ ಉತ್ಸುಕನಾಗಿದ್ದೇನೆ. ಈ ವರ್ಷ ಎಲ್ಲರ ಪಾಲಿಗೆ ತುಂಬಾನೆ ಕಠಿಣ ಎನಿಸಿತ್ತು. ಆದರೆ ನಾನು ವೈದ್ಯ ಲೋಕ ಹಾಗೂ ವಿಜ್ಞಾನಿಗಳ ಮೇಲೆ ನಂಬಿಕೆಯಿಟ್ಟಿದ್ದೆ ಎಂದು ಹೇಳಿದ್ರು.