ಭಾರತೀಯ ಮೂಲದ 68 ವರ್ಷದ ವೃದ್ಧ ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದ ಮನೆಯಲ್ಲಿರುವ ಎರಡನೇ ಮಹಾಯುದ್ಧ ಕಾಲದ ವಾಯು ದಾಳಿ ಆಶ್ರಯವನ್ನ ಪತ್ತೆ ಹಚ್ಚಿದ್ದಾರೆ.
ಹುಲ್ಲುಹಾಸಿನ ಕೆಳಗೆ ಈ ಆಶ್ರಯ ಕೊಠಡಿ ನಿರ್ಮಾಣ ಮಾಡಲಾಗಿದ್ದು ಮ್ಯಾನ್ಹೋಲ್ ಪರಿಶೀಲನೆ ಮಾಡುತ್ತಿದ್ದ ವೇಳೆ ಇದು ಪತ್ತೆಯಾಗಿದೆ.
ಇಂಗ್ಲೆಂಡ್ ವೋಲ್ವರ್ ಹ್ಯಾಂಪ್ಟನ್ನ ನಿವಾಸಿ ಖಂಡು ಪಟೇಲ್ ಶಾಲೆಯೊಂದರ ಉಸ್ತುವಾರಿ ವಹಿಸಿದ್ದಾರೆ. ತಮ್ಮ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಸಂಶೋಧನೆ ಮಾಡಿದ್ದಾರೆ.
ಪಟೇಲ್ ವಾಸ್ತವ್ಯ ಹೂಡಿರುವ ಮನೆ 1920ರ ದಶಕದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಈ ಮನೆಯ ಹಿಂದಿನ ಮಾಲೀಕರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಈ ರಹಸ್ಯ ಕೊಠಡಿ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.
ಕುತೂಹಲಕಾರಿ ವಿಚಾರ ಏನಂದ್ರೆ, ಕಳೆದ 40 ವರ್ಷಗಳಿಂದ ಪಟೇಲ್ ಹಾಗೂ ಪತ್ನಿ ಉಷಾ ಇದೇ ಮನೆಯಲ್ಲಿ ವಾಸಿಸುತ್ತಿದ್ರೂ ಅವರಿಗೆ ಈ ಆಶ್ರಯದ ಬಗ್ಗೆ ಯಾವುದೇ ಸುಳಿವು ಇರಲಿಲ್ಲವಂತೆ. ಸ್ನೇಹಿತರ ಸಹಾಯದಿಂದ ಪಟೇಲ್ ದಂಪತಿ ಈ ಆಶ್ರಯ ತಾಣವನ್ನ ಬಾರ್ ಆಗಿ ಪರಿವರ್ತಿಸಿದ್ದಾರೆ.