ಬೆಂಗಳೂರು: ಕೊನೆಗೂ ಈರುಳ್ಳಿ ದರ ಇಳಿಕೆಯಾಗಿದೆ. ಹೋಲ್ ಸೇಲ್ ನಲ್ಲಿ ಕೆಜಿಗೆ 25 ರೂಪಾಯಿಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 50 ರೂಪಾಯಿ ದರ ಇದೆ.
ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಬೆಲೆ ಏರಿಕೆಯಾಗಿತ್ತು. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದಿದೆ. ಈಜಿಪ್ಟ್ ಈರುಳ್ಳಿ ಕೆಜಿಗೆ 60 ರಿಂದ 70 ರೂಪಾಯಿವರೆಗೂ ದರ ಇದೆ. ನೀರಿನಂಶ ಹೆಚ್ಚಾಗಿರುವ ನೋಡಲು ಆಕರ್ಷಕವಾಗಿರುವ ಈ ಈರುಳ್ಳಿಯನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಆದರೆ, ಇದು ರುಚಿಯಾಗಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಪ್ರವಾಹದಿಂದ ಬೆಳೆಹಾನಿ, ಪೂರೈಕೆಯಲ್ಲಿ ವ್ಯತ್ಯಯ ಮೊದಲಾದ ಕಾರಣದಿಂದ ಈರುಳ್ಳಿ ದರ 100 ರೂಪಾಯಿಯವರೆಗೆ ತಲುಪಿದ್ದು, ಈಗ ಬೆಲೆ ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 25 ರೂ.ವರೆಗೂ ದರ ಇದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬಂದಲ್ಲಿ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 50 ರೂಪಾಯಿ ಹಾಪ್ ಕಾಮ್ಸ್ ನಲ್ಲಿ ಕೆಜಿಗೆ 66 ರೂಪಾಯಿಗೆ ಈರುಳ್ಳಿ ಮಾರಾಟವಾಗುತ್ತಿದೆ.