ಅತ್ತ ಆರ್.ಆರ್.ನಗರ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಆದರೆ ಫಲಿತಾಂಶ ಬಂದು ಇಷ್ಟು ದಿನ ಕಳೆದರೂ ಸಚಿವ ಸಂಪುಟ ವಿಸ್ತರಣೆಯಾಗಲೀ ಅಥವಾ ಪುನರ್ ರಚನೆಯಾಗಲೀ ಆಗಲಿಲ್ಲ. ಪ್ರತಿ ನಿತ್ಯ ಆಕಾಂಕ್ಷಿಗಳು ಯಡಿಯೂರಪ್ಪರವರಿಗೆ ದುಂಬಾಲು ಬಿದ್ದಿದ್ದಾರೆ.
ಇನ್ನು ಸಚಿವ ಸಂಪುಟ ವಿಸ್ತರಣೆ ವಿಳಂಬ ಆದ ಬೆನ್ನಲ್ಲೇ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಐವರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಆರ್. ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ, ಉಮೇಶ್ ಕತ್ತಿ ಮತ್ತು ಸಿಪಿ ಯೋಗೇಶ್ವರ್ ಸೇರಿ ಒಟ್ಟು ಐವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆಯಂತೆ. ಇನ್ನು ಸೋಮವಾರದಿಂದ ಅಧಿವೇಶನ ಪ್ರಾರಂಭವಾಗುತ್ತಿದ್ದು, ಅದರ ಒಳಗೇ ಸಂಪುಟ ವಿಸ್ತರಣೆಗೆ ಮಾಡಬೇಕು ಎಂಬುದು ಸಿಎಂ ಬಯಕೆ. ಇದರ ಜೊತೆಗೆ ಮುಂದೆ ಚುನಾವಣೆಗಳು ಇರೋದ್ರಿಂದ ಮತ್ತೆ ವಿಳಂಬವಾಗಬಹುದು ಎಂಬ ಆಲೋಚನೆ ಕೂಡ ಇದೆ.