ಅತ್ತ ಕೊರೊನಾದಿಂದ ಜನ ಸಾಮಾನ್ಯರು ಕಂಗೆಟ್ಟು ಹೋಗಿದ್ದರೆ, ಇತ್ತ ದರ ಏರಿಕೆಯಿಂದಾಗಿ ಮತ್ತೊಮ್ಮೆ ಜನ ಬೀದಿಗೆ ಬೀಳುತ್ತಿದ್ದಾರೆ. ಸತತವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆಗಳಿಂದ ವಾಹನ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಇಂದು ಮತ್ತೆ ಇಂಧನ ಬೆಲೆ ಏರಿಕೆಯಾಗಿದ್ದು ನುಂಗಲಾರದ ತುತ್ತಾಗಿದೆ.
2018ರಲ್ಲಿ ಗರಿಷ್ಟ ಮಟ್ಟಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದವು. ಇದೀಗ 2 ವರ್ಷದ ಬಳಿಕ ಮತ್ತೆ ಗರಿಷ್ಟ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಕೊರೊನಾ ಲಸಿಕೆಯ ಪ್ರಯೋಗ ಹಾಗೂ ಸಕಾರಾತ್ಮಕ ದೃಷ್ಟಿಕೋನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 83.13 ಇದೆ. ಸುಮಾರು 27 ಪೈಸೆ ಏರಿಕೆಯಾಗಿದೆ. ಇನ್ನು ಡೀಸೆಲ್ ದರ 73.32 ಇದೆ. 25 ಪೈಸೆ ಡೀಸೆಲ್ ದರ ಏರಿಕೆಯಾಗಿದೆ. ಕಳೆದ 16 ದಿನಗಳಲ್ಲಿ ಡೀಸೆಲ್ ದರದಲ್ಲಿ 2.89 ರೂಪಾಯಿಯಷ್ಟು ಏರಿಕೆಯಾಗಿದ್ದರೆ, ಪೆಟ್ರೋಲ್ ದರ 2.07 ರೂಪಾಯಿಯಷ್ಟು ಏರಿಕೆಯಾಗಿದೆ.